ಟ್ವಿಟರ್​ಗೆ ಗುಡ್ ಬೈ ಹೇಳಿದ ಉದ್ಯೋಗಿಗಳಿಗೆ ಕೂ ಯಿಂದ ಭರ್ಜರಿ ಆಫರ್

ಟ್ವಿಟರ್​ಗೆ ಗುಡ್ ಬೈ ಹೇಳಿದ ಉದ್ಯೋಗಿಗಳಿಗೆ ಕೂ ಯಿಂದ ಭರ್ಜರಿ ಆಫರ್

ಇತ್ತೀಚೆಗಷ್ಟೆ ಎಲಾನ್ ಮಸ್ಕ್ ಟ್ವಿಟರ್ ಕಂಪನಿಯನ್ನು ತನ್ನ ತೆಕ್ಕೆಗೆ ಪಡೆದುಕೊಂಡ ಬಳಿಕ ಅನೇಕ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದ್ದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಸುಮಾರು 3,000 ಉದ್ಯೋಗಿಗಳು ಟ್ವಿಟರ್ ತೊರೆದಿದ್ದರು. ಇದೀಗ ಹೀಗೆ ಟ್ವಿಟರ್​ಗೆ ಗುಡ್ ಬೈ ಹೇಳಿದ ಉದ್ಯೋಗಿಗಳನ್ನು ಶೀಘ್ರದಲ್ಲೇ ನಾವು ನೇಮಿಸಿಕೊಳ್ಳುತ್ತೇವೆ ಎಂದು ಭಾರತದ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಕೂ ಹೇಳಿದೆ. ಕೂ ಸಹ-ಸಂಸ್ಥಾಪಕ ಮಯಾಂಕ್ ಬಿಡವಟ್ಕ ಟ್ವೀಟ್‌ ಮಾಡುವ ಮೂಲಕ ಈ ವಿಷಯ ತಿಳಿಸಿದೆ.