ಮೈಸೂರು ಅರಮನೆ ಕೋಟೆ ಗೋಡೆ ಕುಸಿತ

ಮೈಸೂರು ಅರಮನೆ ಕೋಟೆ ಗೋಡೆ ಕುಸಿತ

ಮೈಸೂರು,ಅ.18- ನಗರದಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿದ್ದ ಭಾರೀ ಮಳೆಯಿಂದಾಗಿ ಐತಿಹಾಸಿಕ ಮೈಸೂರು ಅರಮನೆ ಸುತ್ತ ನಿರ್ಮಿಸಲಾಗಿದ್ದ ಕೋಟೆಯ ಗೋಡೆ ಕುಸಿದಿದೆ. ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ಇರುವ ಕೋಟೆಯ ಗೋಡೆ ಕುಸಿದಿದೆ.

ಅರಮನೆ ರಕ್ಷಣೆಗಾಗಿ ನಿರ್ಮಿಸಲಾಗಿದ್ದ ಕೋಟೆಯ ಗೋಡೆ ಇದಾಗಿದೆ. ಕೋಟೆ ಮಾರಮ್ಮ ದೇಗುಲ ಜಯಮಾರ್ತಾಂಡ ದ್ವಾರದ ನಡುವಿನ ಕೋಟೆಯ ಗೋಡೆ ಇದಾಗಿದೆ. ಆಳರಸರ ಕಾಲದಲ್ಲಿ ಅರಮನೆಯ ರಕ್ಷಣೆಗಾಗಿ ಈ ಕೋಟೆಯನ್ನು ನಿರ್ಮಿಸಲಾಗಿತ್ತು.

ಶತ್ರುಗಳ ದಾಳಿಯಿಂದ ರಕ್ಷಣೆ ಪಡೆಯಲು ಅರಮನೆ ಸುತ್ತಲೂ ಈ ಕೋಟೆಯನ್ನು ನಿರ್ಮಿಸಲಾಗಿತ್ತು. ಗೋಡೆ ಕುಸಿತಗೊಂಡ ಜಾಗದಲ್ಲಿ ಟಾರ್ಪಲ್ ಹೊದಿಸಿ ರಕ್ಷಣಾ ಕಾರ್ಯ ನಡೆಸಲಾಗಿದೆ.