ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ 70 ಸ್ಥಾನ ದಾಟುವುದಿಲ್ಲ : ಮಾಜಿ ಸಿಎಂ HDK

ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ 70 ಸ್ಥಾನ ದಾಟುವುದಿಲ್ಲ : ಮಾಜಿ ಸಿಎಂ HDK

ಬೆಂಗಳೂರು : ಈ ಬಾರಿಯ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ 70 ಸ್ಥಾನ ಕೂಡ ದಾಟುವುದಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ, ಕಾಂಗ್ರೆಸ್ ನವರು ಜೆಡಿಎಸ್ ಬೆಳವಣಿಗೆ ಕಂಡು ತಳಮಳಗೊಂಡಿದ್ದಾರೆ.

ಈ ಬಾರಿ ಜೆಡಿಎಸ್ ಗೆ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಏಪ್ರಿಲ್ 28 ರವರೆ ನಮ್ಮ ಪ್ರಚಾರ ಮುಂದುವರೆಯುತ್ತದೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲ್ಲ ಅಂತಾ ಬಿಜೆಪಿ, ಕಾಂಗ್ರೆಸ್ ನಾಯಕರ ಹೇಳಿಕೆ ವಿಚಾರದ ಕುರಿತು ಪ್ರತಿಕ್ರಿಯೆನೀಡಿದ ಕುಮಾರಸ್ವಾಮಿ, ಜೆಡಿಎಸ್ ಪಕ್ಷದ ಬೆಳವಣಿಗೆ ಕಂಡು ರಾಷ್ಟ್ರೀಯ ಪಕ್ಷದಗಳಾದ ಕಾಂಗ್ರೆಸ್, ಬಿಜೆಪಿ ತಳಮಳಗೊಂಡಿದ್ದಾರೆ. ಕಾಂಗ್ರೆಸ್ ನಾಯಕರೇ 500 ರೂ. ಕೊಟ್ಟು ಜನ ಸೇರಿಸಿದ್ದೀವಿ ಎಂದಿದ್ದರು. ನಾವು ಆ ರೀತಿ ದುಡ್ಡು ಕೊಟ್ಟು ಜನ ಸೇರಿಸಲ್ಲ. ನಮ್ಮ ಗುರಿ 123 ಸ್ಥಾನ ಗೆಲ್ಲುವುದು ಎಂದಿದ್ದಾರೆ.