ಹಿರೇಮಠಗೆ 'ಬಾದ್‌ಶಾ ಖಾನ್ ಪ್ರಶಸ್ತಿ'

ಧಾರವಾಡ: ಸಮಾಜ ಪರಿವರ್ತನ ಸಮುದಾಯದ ಸಂಸ್ಥಾಪಕ ಎಸ್.ಆರ್.ಹಿರೇಮಠ ಅವರಿಗೆ ಮಧ್ಯಪ್ರದೇಶದ ಗ್ವಾಲಿಯರ್‌ನ ಐಟಿಎಂ ವಿಶ್ವವಿದ್ಯಾಲಯ 'ಬಾದ್‌ಶಾ ಖಾನ್ ಸ್ಮಾರಕ ಪ್ರಶಸ್ತಿ' ನೀಡಿ ಗೌರವಿಸಿದೆ. ಪ್ರಶಸ್ತಿ ₹ 1 ಲಕ್ಷ ನಗದು ಮತ್ತು ಪ್ರಶಂಸಾಪತ್ರ ಒಳಗೊಂಡಿದೆ.
ಗಡಿನಾಡಿನ ಗಾಂಧಿ ಎಂದೇ ಹೆಸರಾದ ಸ್ವಾತಂತ್ರ್ಯ ಹೋರಾಟಗಾರ ಖಾನ್ ಅಬ್ದುಲ್ ಗಫಾರ್ ಖಾನ್ ಅವರ ಸ್ಮರಣಾರ್ಥ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಹಿರೇಮಠ ಅವರ ಹೋರಾಟ ಗಳನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾ ಗಿದೆ ಎಂದು ವಿಶ್ವವಿದ್ಯಾಲಯ ಹೇಳಿದೆ.