HDK' ಹೇಳಿಕೆ ಬೆನ್ನಲ್ಲೇ ಕುತೂಹಲ ಮೂಡಿಸಿದ ಜೆ.ಪಿ ನಡ್ಡಾ ಶೃಂಗೇರಿ ಭೇಟಿ

HDK' ಹೇಳಿಕೆ ಬೆನ್ನಲ್ಲೇ ಕುತೂಹಲ ಮೂಡಿಸಿದ ಜೆ.ಪಿ ನಡ್ಡಾ ಶೃಂಗೇರಿ ಭೇಟಿ

ಬೆಂಗಳೂರು : ಬಿಜೆಪಿ ರಾಷ್ಟ್ರ್ಯಾಧ್ಯಕ್ಷ ಜೆ.ಪಿ ನಡ್ಡಾ ( J.P Nadda) ಫೆ.20 ಕ್ಕೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ಶಾರದಾ ಮಠಕ್ಕೆ ಭೇಟಿ ನೀಡಲಿದ್ದು, ಬಹಳ ಕುತೂಹಲ ಮೂಡಿಸಿದೆ.

ಹೌದು, ಫೆ.20 ರಂದು ರಾತ್ರಿ ಶೃಂಗೇರಿಗೆ ಜೆಪಿ ನಡ್ಡಾ ಆಗಮಿಸಲಿದ್ದು, ಶಾರದಾ ದೇವಿ ದರ್ಶನ ಪಡೆದು ನಂತರ ಜಗದ್ಗುರುಗಳನ್ನು ಭೇಟಿ ಮಾಡಲಿದ್ದು, ಗುರುಗಳ ಭೇಟಿಗೆ 20 ನಿಮಿಷ ಸಮಯಾವಕಾಶ ಕೇಳಿದ್ದಾರೆ.

ಶೃಂಗೇರಿ ಮಠದ ಮೇಲೆ ದಾಳಿ ಮಾಡಿದ್ದವರ ಬಗ್ಗೆ ಎಚ್ಚರಿಕೆಯಿಂದಿರಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ನೀಡಿರುವ ಬೆನ್ನಲ್ಲೇ ಜೆಪಿ ನಡ್ಡಾ ಶೃಂಗೇರಿ ಭೇಟಿ ಮಹತ್ವ ಪಡೆದುಕೊಂಡಿದೆ.

ಶೃಂಗೇರಿ ಮಠವನ್ನು ಮಹಾರಾಷ್ಟ್ರದಿಂದ ಬಂದ ಪೇಶ್ವೆಗಳು ಒಡೆದಾಗ ಹಿಂದೂ ಮಠವಾದ ಶೃಂಗೇರಿ ಮಠವನ್ನು ಉಳಿಸಿದವರು ಟಿಪ್ಪು. ಹಿಂದೂ ದೇವಸ್ಥಾನವನ್ನು ಟಿಪ್ಪು ಉಳಿಸಿದ್ದಾರೆ. ಶೃಂಗೇರಿ ಮಠದ ಮೇಲೆ ದಾಳಿ ಮಾಡಿದ್ದವರ ಬಗ್ಗೆ ಎಚ್ಚರಿಕೆಯಿಂದಿರಿ ಎಂದು H.D ಕುಮಾರಸ್ವಾಮಿ ಹೇಳಿಕೆ ನೀಡಿದ್ದರು.