ಬೆಂಗಳೂರಿನಲ್ಲಿ ಚಿಕನ್ ರೋಲ್ ಕೊಡದಿದ್ದಕ್ಕೆ ಹೋಟೆಲ್ ರೂಮಿಗೆ ಬೆಂಕಿ ಇಟ್ಟ ಕಿಡಿಗೇಡಿಗಳು
ಬೆಂಗಳೂರು: ನಗರದಲ್ಲಿ ಚಿಕನ್ ರೋಲ್ ಕೊಡಲಿಲ್ಲ ಎಂದು ಮೂವರು ಕಿಡಿಗೇಡಿಗಳು ಹೋಟೆಲ್ ರೂಮಿಗ್ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ನಡೆದಿದೆ.ತಡರಾತ್ರಿ ಚಿಕನ್ ರೋಲ್ ಕೇಳ್ಕೊಂಡು ಹನುಮಂತನಗರದ ಕುಮಾರ್ ಹೋಟೆಲ್‌ಗೆ ಮೂವರು ಯುವಕರು ಬಂದಿದ್ದಾರೆ. ಹೋಟೆಲ್ ಸಿಬ್ಬಂದಿ ಇಲ್ಲ ಎಂದಿದ್ದಕ್ಕೆ ಯುವಕರ ನಡುವೆ ಮಾತಿನ ಚಕಮಕಿ ಆಗಿ ಗಲಾಟೆಗೆ ನಡೆದಿದೆ.ಗಲಾಟೆಯಲ್ಲಿ ಹೋಟೆಲ್ ಸಿಬ್ಬಂದಿ ಯುವಕರಿಗೆ ತದುಕಿ ಕಳಿಸಿದ್ದಾರೆ. ಏಟು ತಿಂದು ಸುಮ್ಮನಾಗದ ಗ್ರಾಹಕ ದೇವರಾಜ್, ಗಣೇಶ್ ಹಾಗೂ ದೇವೇಗೌಡ ನೇರ ಪೆಟ್ರೋಲ್‌ಬಂಕ್‌ಗೆ ತೆರಳಿ 8 ಲೀಟರ್ ಪೆಟ್ರೋಲ್ ಖರೀದಿಸಿದ್ದಾರೆ. ಅಲ್ಲಿಂದ ಸೀದಾ ಕುಮಾರ್ ಹೋಟೆಲ್ ಪಕ್ಕದಲ್ಲೇ ಇರೋ ಹೋಟೆಲ್ ಸಿಬ್ಬಂದಿಯ ರೂಂ ಕಡೆ ಹೋಗಿದ್ದಾರೆ. ಮನೆಯ ಬಾಗಿಲು, ಕಿಟಕಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಅದೃಷ್ಟವಶಾತ್ ರೂಮ್‌ನಲ್ಲಿ ವಾಸವಿದ್ದ ಹೋಟೆಲ್ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.