ಚೀನಾ: ಕೋವಿಡ್ ಪರೀಕ್ಷೆ ಕಿಟ್ ಕಾರ್ಖಾನೆಯಲ್ಲಿ ಕಾರ್ಮಿಕರ ಜಗಳ
ಬೀಜಿಂಗ್ : ಚೀನಾದ ನೈರುತ್ಯ ಭಾಗದ ಚಾಂಗ್‌ಕಿಂಗ್ ನಗರದಲ್ಲಿನ ಕೋವಿಡ್ ಪರೀಕ್ಷೆ ಕಿಟ್ ತಯಾರಿಕಾ ಕಾರ್ಖಾನೆಯಲ್ಲಿ ನೂರಾರು ಕಾರ್ಮಿಕರು ಪೊಲೀಸರೊಂದಿಗೆ ನಡೆಸಿರುವ ಘರ್ಷಣೆ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಭಾನುವಾರ ಹರಿದಾಡಿದೆ.
ಮತ್ತೆ ವ್ಯಾಪಕವಾಗಿರುವ ಕೋವಿಡ್ ಪಿಡುಗಿನಿಂದ ದೇಶವು ಹೊರಬರಲು ಪ್ರಯತ್ನಿಸುತ್ತಿರುವ ಸಂದರ್ಭದಲ್ಲೇ ಈ ಘಟನೆ ನಡೆದಿದೆ.
ಪೊಲೀಸರ ಮೇಲೆ ಮೇಲೆ ಕಾರ್ಮಿಕರು ಬುಟ್ಟಿಗಳನ್ನು ಎಸೆಯುವ ಹಾಗೂ ಪರೀಕ್ಷಾ ಕಿಟ್‌ಗಳನ್ನು ತೋರಿಸುವ ದೃಶ್ಯ ಕಂಡುಬಂದಿದೆ. ಇನ್ನೊಂದು ದೃಶ್ಯದಲ್ಲಿ 'ಅಕ್ರಮ ಚಟುವಟಿಕೆಗಳನ್ನು ನಿಲ್ಲಿಸಿ' ಎನ್ನುವ ಧ್ವನಿ ಕೇಳಿಸುತ್ತದೆ. ವಿಡಿಯೊ ಹಂಚಿಕೊಂಡ ವ್ಯಕ್ತಿ 'ಅನೇಕರಿಗೆ ವೇತನ ನೀಡಿಲ್ಲ' ಎಂದು ಬರೆದುಕೊಂಡಿದ್ದಾರೆ ಎಂಬುದಾಗಿ ಸುದ್ದಿಸಂಸ್ಥೆ ವರದಿ ಮಾಡಿದೆ.