ದಲಿತರ ದೇಗುಲ ಪ್ರವೇಶಕ್ಕೆ ವಿರೋಧ: ಟ್ರಸ್ಟಿ ಮೇಲೆ ಬಿತ್ತು ಕೇಸ್ | Dharwad | Ram Temples |
ಧಾರವಾಡದ ಮಾಳಮಡ್ಡಿಯಲ್ಲಿರುವ ವನವಾಸಿ ರಾಮಮಂದಿರಕ್ಕೆ ದಲಿತರೊಬ್ಬರು ಬಂದಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ ದೇವಸ್ಥಾನದ ಟ್ರಸ್ಟಿ ಮೇಲೆ ಇದೀಗ ಜಾತಿನಿಂದನೆ ದೂರು ದಾಖಲಾಗಿದೆ. ಕಿಶೋರ್ ಕಟ್ಟಿ ಎಂಬುವವರು ಕಾರ್ತಿಕ ಮಾಸದ ಅಂಗವಾಗಿ ರಾಮಮಂದಿರಕ್ಕೆ ಹೋಗಿದ್ದ ಸಂದರ್ಭದಲ್ಲಿ ದೇವಸ್ಥಾನದ ಟ್ರಸ್ಟಿ ಆರ್.ಪಿ.ಕುಲಕರ್ಣಿ ಎನ್ನುವವರು ಕಿಶೋರ್ ಅವರನ್ನು ತಡೆದು ನಿಮ್ಮಂತವರು ದೇವಸ್ಥಾನಕ್ಕೆ ಬರಬೇಡಿ. ದೇವಸ್ಥಾನ ಮೈಲಿಗೆ ಆಗುತ್ತದೆ. ಗೇಟ್ ಮುಂಭಾಗದಲ್ಲಿ ನಿಂತು ನಮಸ್ಕಾರ ಮಾಡಿಕೊಂಡು ಹೋಗಿ ಎಂದು ನಿಂದನೆ ಮಾಡಿದ್ದಾರೆ ಎಂದು ಕಿಶೋರ್ ಆರೋಪ ಮಾಡಿದ್ದಾರೆ. ಸದ್ಯ ಕಿಶೋರ್ ಅವರು ಧಾರವಾಡದ ವಿದ್ಯಾಗಿರಿ ಪೆÇಲೀಸ್ ಠಾಣೆಯಲ್ಲಿ ಈ ಸಂಬಂಧ ಜಾತಿನಿಂದನೆ ದೂರು ದಾಖಲಿಸಿದ್ದು, ದೇವಸ್ಥಾನಕ್ಕೆ ಎಸಿಪಿ ಅನುಷಾ ಅವರು ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.