ಪೊಲೀಸ್ ಸಿಬ್ಬಂದಿ ಮೇಲೆ ಸಿಎಂ ಗರಂ |Bidar|
ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆ ಪ್ರಚಾರ ಹಿನ್ನೆಲೆಯಲ್ಲಿ ಬೀದರ ನಲ್ಲಿ ಖಾಳೆ ಫಂಗಶನ್ ಹಾಲಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪೊಲೀಸ್ ಸಿಬ್ಬಂದಿ ಮೇಲೆ ಗರಂ ಆದರು. ಗ್ರಾಮ ಪಂಚಾಯತಿ ಸದಸ್ಯರ ಸಮಾವೇಶದಲ್ಲಿ ಭಾಷಣ ಮಾಡುವ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ಇಬ್ಬರು ಮಾತನಾಡುತ್ತಾ ಸಿಎಮ್ ಭಾಷಣಕ್ಕೆ ತೊಂದರೆ ನೀಡಿದರು. ಇದರಿಂದ ಕೋಪಗೊಂಡ ಸಿಎಮ್ ಭಾರತೀಯ ಜನತಾ ಪಕ್ಷ ಶಿಸ್ತಿನ ಪಕ್ಷ ಎಂದು ಪೊಲೀಸ್ ಸಿಬ್ಬಂದಿ ಮೇಲೆ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದಾಗಿ ಪೊಲೀಸ್ ಪೇದೆ ತಲೆ ಕೆಳಗೆ ಹಾಕಿ ಬೇರೆ ಸ್ಥಳಕ್ಕೆ ಹೋಗಿ ನಿಲ್ಲುವಂತಾಯಿತು.