ಸೋಲಿನ ಭೀತಿಯಲ್ಲಿ ಸಿಎಂ ಬೀದರಿಗೆ ಬರುತ್ತಿದ್ದಾರೆ | Bidar |

ಸೋಲಿನ ಭೀತಿಯಲ್ಲಿ ಸಿಎಂ ಬೀದರಿಗೆ ಬರುತ್ತಿದ್ದಾರೆ ಎಂದು ಪರಿಷತ್ ಚುನಾವಣೆಯ ಪ್ರಚಾರಕ್ಕೆ ಇಂದು ಬೀದರ್ ಗೆ ಸಿಎಂ ಆಗಮಿಸುತ್ತಿರುವ ಹಿನ್ನಲೆ ಹುಮ್ನಾಬಾದ್ ಶಾಸಕ ರಾಜಶೇಖರ ಪಾಟೀಲ್ ಹೇಳಿಕೆ ನೀಡಿದ್ದಾರೆ. 25 ವಿಧಾನ ಪರಿಷತ್ ಸ್ಥಾನಗಳ ಪೈಕಿ ಸಿಎಂ ಬೀದರ್ ಗೆ ಮೊದಲು ಬರುತ್ತಿದ್ದು ಫಲಿತಾಂಶ ಸರ್ಕಾರ ಪರವಾಗಿಲ್ಲಾ ಎಂದು ಈಗಾಗಲೇ ಸರ್ಕಾರಕ್ಕೆ ಇಂಟೆಲಿಜೆನ್ಸಿ ರಿಪೆÇೀರ್ಟ್ ಹೋಗಿದೆ. ಹೀಗಾಗೀ ಸಿಎಂ ಬಸವರಾಜ್ ಬೊಮ್ಮಾಯಿ ಪ್ರಥಮವಾಗಿ ಗಡಿ ಜಿಲ್ಲೆ ಬೀದರಿಗೆ ಬಂದು ಕಾರ್ಯಕರ್ತರ ಜೊತೆ ಸಭೆ ಮಾಡುತ್ತಿದ್ದಾರೆ ಎಂದು ಶಾಸಕರು ಪಾಟೀಲ ಟಾಂಗ್ ನೀಡಿದ್ದಾರೆ.