ಕೋವಿಡ್ ಲಸಿಕೆಗಾಗಿ ಕಿಮ್ಸ್ ಆಸ್ಪತ್ರೆಯತ್ತ ಹರಿದು ಬಂದ ಜನಸಾಗರ
ಬೃಹತ್ ಕೋವಿಡ್ ಲಸಿಕಾಕರಣ ಅಭಿಯಾನದಲ್ಲಿ ಜಿಲ್ಲೆಯಲ್ಲಿ 85 ಸಾವಿರ ಕೋವಿಡ್ ಲಸಿಕೆ ನೀಡುವ ಗುರಿ ಹೊಂದಲಾಗಿದ್ದು, ಈ ಹಿನ್ನೆಲೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಜನಸಾಗರವೇ ಹರಿದು ಬರುತ್ತಿದೆ. ಬೆಳಿಗ್ಗೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ಚಾಲನೆ ನೀಡಿದ್ದು, ಬೃಹತ್ ಲಸಿಕೆ ಅಭಿಯಾಕ್ಕೆ ಅಗತ್ಯ ಇರುವ ಲಸಿಕೆಗಳು ನಿನ್ನಯೇ ಜಿಲ್ಲಾಡಳಿತದ ಕೈ ಸೇರಿವೆ. 420ಕ್ಕೂ ಹೆಚ್ಚು ಲಸಿಕಾ ತಂಡಗಳನ್ನು ರಚಿಸಿ ಜಿಲ್ಲೆಯ ಎಲ್ಲಾ ಗ್ರಾಮಗಳಿಗೂ ಕಳುಹಿಸಿಕೊಡಲಾಗಿದೆ. ಜೂನ್ 26 ಕ್ಕೂ ಮೊದಲು ಕೋವಿಶೀಲ್ಡ್, ಕೋವ್ಯಾಕ್ಸಿನ್ ಮೊದಲ ಡೋಸ್ ಪಡೆದವರು ಎರಡನೇ ಡೋಸ್ ಪಡೆದುಕೊಳ್ಳಬಹುದಾಗಿದೆ. 90 ಸಾವಿರಕ್ಕೂ ಅಧಿಕ ಲಸಿಕೆ ಲಭ್ಯ ಇವೆ. ಇನ್ನೂ ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ಪತ್ರಿ ದಿನ 10 ಸಾವಿರಕ್ಕೂ ಅಧಿಕ ಲಸಿಕೆ ನೀಡಲಾಗುತ್ತಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.