ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಿಸಿದ್ದ ಕಾಂಗ್ರೆಸ್

ಹರಪನಹಳ್ಳಿ: 'ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಅಂಗನವಾಡಿ, ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಿಸಿ ಅವರ ಕೆಲಸವನ್ನು ಗೌರವಿಸಿತ್ತು.
ಪಟ್ಟಣದ ತರಳಬಾಳು ಕಲ್ಯಾಣ ಮಂಟಪದ ಆವರಣದಲ್ಲಿ ಮಂಗಳವಾರ ಸಂತೋಷ್ ಲಾಡ್ ಫೌಂಡೇಷನ್‌ನಿಂದ ಆಯೋಜಿಸಿದ್ದ ಕೊರೊನಾ ವಾರಿಯರ್‌ಗಳಾದ ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಪೌರಕಾರ್ಮಿಕರ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
'ಆಶಾ, ಅಂಗನವಾಡಿ ಕಾರ್ಯಕರ್ತೆ
ಯರು ಸಕ್ರಿಯ ರಾಜಕಾರಣದಲ್ಲಿ ಪಾಲ್ಗೊಂಡು ಜನಪರ, ಪ್ರಾಮಾಣಿಕ
ವ್ಯಕ್ತಿಯನ್ನು ಮುಂದಿನ ಚುನಾವಣೆಯಲ್ಲಿ ಗೆಲ್ಲಿಸಬೇಕು. ಕೆಲಸ ಮಾಡದವರಿಗೆ ತಕ್ಕ ಪಾಠ ಕಲಿಸಿ' ಎಂದು ಹೇಳಿದರು.
'ಅಕ್ಷರ ದಾಸೋಹ ಮಧ್ಯಾಹ್ನ ಬಿಸಿಯೂಟ ಯೋಜನೆ ಜಾರಿಗೆ ತಂದಿದ್ದು ಕಾಂಗ್ರೆಸ್. ನಾನು ಕಾರ್ಮಿಕ ಸಚಿವನಾಗಿದ್ದಾಗ ಪೌರ ಕಾರ್ಮಿಕರಿಗೆ ವೇತನ ಹೆಚ್ಚಳ ಮಾಡಿದ್ದೇನೆ. ಈಗಿರುವ ಸರ್ಕಾರ ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ತಿಂಗಳಿಗೆ ₹ 13 ಸಾವಿರ ವೇತನ ನೀಡಬೇಕು' ಎಂದು ಆಗ್ರಹಿಸಿದರು.
ಕಾಂಗ್ರೆಸ್ ಮುಖಂಡ ಎಂ.ಟಿ.ಸುಭಾಷ್ ಚಂದ್ರ ಮಾತನಾಡಿ, 'ಕೋವಿಡ್ ಲಸಿಕೆಯನ್ನು ಜನರ ಮನೆ ಬಾಗಿಲಿಗೆ ತಲುಪಿಸಿದ್ದು ಆಶಾ ಕಾರ್ಯಕರ್ತೆಯರು. ಪ್ರಧಾನಿ ನರೇಂದ್ರ ಮೋದಿ ಅಲ್ಲ. ಸಂತೋಷ್ ಲಾಡ್ ಅವರು ನೊಂದವರ ಪರವಾಗಿ ಕೆಲಸ ಮಾಡುವ ನಾಯಕ' ಎಂದು ಹೇಳಿದರು.
ಮುಖಂಡರಾದ ಕವಿತಾ ರೆಡ್ಡಿ ಮಾತನಾಡಿ, 'ಸನ್ಮಾನ ಕಾರ್ಯಕ್ರಮಕ್ಕೆ ಹೋಗದಂತೆ ಆದೇಶಿಸಿರುವ ಸ್ಥಳೀಯ ಶಾಸಕರು ಕೀಳುಮಟ್ಟದ ರಾಜಕಾರಣ ನಿಲ್ಲಿಸಬೇಕು. ಸದನದಲ್ಲಿ ಬಾಯಿ ತೆಗೆದು ಮಾತನಾಡದ ನೀವು, ಮಹಿಳೆಯರ ವಿಷಯದಲ್ಲಿ ರಾಜಕೀಯ ಮಾಡಬೇಡಿ' ಎಂದು ತಿರುಗೇಟು ನೀಡಿದರು.
ಮುಖಂಡ ಎನ್.ಅನಂತನಾಯ್ಕ್, ಪ್ರಗತಿಪರ ಚಿಂತಕ ಕೋಡಿಹಳ್ಳಿ ಭೀಮಪ್ಪ, ಮುಂಡರಗಿ ನಾಗರಾಜ್, ಇರ್ಫಾನ್, ತೆಲಿಗಿ ಮಂಜುನಾಥ್, ಸಿದ್ದು ಹಳ್ಳಿಗೌಡರ, ಶಿವಯೋಗಿ ಸ್ವಾಮಿ, ಕೆ.ಜಗದಪ್ಪ, ಮಹೇಶ್ವರ ಸ್ವಾಮಿ, ಎ.ಎಂ.ವಿಶ್ವನಾಥ್, ಸುಮಾ, ಮೂಸಾ ಸಾಬ್, ಗುಡಿಹಳ್ಳಿ ಹಾಲೇಶ್, ಜಯಲಕ್ಷ್ಮೀ, ಸೀಮಾ, ಜೀಷಾನ್, ಜಮೀರ್, ಗೋಣೆಪ್ಪ ಇದ್ದರು.
ಕಲಘಟಗಿಯಲ್ಲಿ ಸ್ಪರ್ಧೆ: ಸಂತೋಷ ಲಾಡ್
ಹರಪನಹಳ್ಳಿ: 'ಮುಂದಿನ ಚುನಾವಣೆಯಲ್ಲಿ ಬಳ್ಳಾರಿ ಜಿಲ್ಲೆಯ ಯಾವುದೇ ಕ್ಷೇತ್ರದಲ್ಲಿ ನಾನು ಸ್ಪರ್ಧಿಸಲ್ಲ. ಕಲಘಟಗಿಯಲ್ಲೇ ಸ್ಪರ್ಧಿಸುವುದು ಖಚಿತ' ಎಂದು ಮಾಜಿ ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ.
'ಸಂಜಿವಿನಿ ಟ್ರಸ್ಟ್ ಮತ್ತು ಸಂತೋಷ್ ಲಾಡ್ ಫೌಂಡೇಷನ್ ಸಹಯೋಗದಲ್ಲಿ ವಿವಿಧ ಜಿಲ್ಲೆಗಳಲ್ಲಿ ಕೊರೊನಾ ವಾರಿಯರ್‌ಗಳನ್ನು ಸನ್ಮಾನಿಸಲಾಗುತ್ತಿದೆ. ಬಳ್ಳಾರಿ ಜಿಲ್ಲೆಯ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರನ್ನೂ ಸನ್ಮಾನಿಸಲಾಗುತ್ತಿದೆ. ಹಾಗೆಯೇ ಧಾರವಾಡ ಜಿಲ್ಲೆಯ ಕಲಘಟಗಿಯಲ್ಲೂ ವಾರಿಯರ್‌ಗಳನ್ನು ಸನ್ಮಾನಿಸಿದ್ದೇವೆ. ಅಂದ ಮಾತ್ರಕ್ಕೆ ಬಳ್ಳಾರಿಯಲ್ಲಿ ಸ್ಪರ್ಧಿಸಲ್ಲ. ಕಲಘಟಗಿಯಲ್ಲೇ ಸ್ಪರ್ಧಿಸುವೆ' ಎಂದು ಹೇಳಿದರು.