ಮಹದಾಯಿ ಜಲ ವಿವಾದ'ದ ವೇಳೆ 'ಆಸ್ತಿಪಾಸ್ತಿ ನಷ್ಟ ಅನುಭವಿಸಿದ'ವರಿಗೆ ಗುಡ್ ನ್ಯೂಸ್: ಪರಿಹಾರಕ್ಕೆ ಅರ್ಜಿ ಆಹ್ವಾನ

ಬೆಂಗಳೂರು: ರಾಜ್ಯ ಸರ್ಕಾರದಿಂದ ಮಹದಾಯಿ ನದಿ ಸಮಸ್ಯೆಗಳ ಹಿಂಸಾಚಾರಕ್ಕೆ ( mahadayi water dispute ) ಸಂಬಂಧಿಸಿದಂತೆ ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗಳ ನಷ್ಟ ಪರಿಹಾರಕ್ಕಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಇನ್ನೂ ಮಹದಾಯಿ ಹಕ್ಕು ಕಮೀಷನ್ನರ್ ಆಗಿ ನಿವೃತ್ತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದಂತ ಮೊಹಮ್ಮದ್ಗೌಸ್ ಮೊಹಿದ್ದೀನ್ ಪಾಟೀಲ್ ಅವರನ್ನು ಸರ್ಕಾರ ನೇಮಿಸಿದ ನಂತ್ರ, ದಿನಾಂಕ 28-08-2020ರಂದು ಅಧಿಕಾರ ಸ್ವೀಕರಿಸಿದ್ದಾರೆ.
ಅವರು ಧಾರವಾಡ ಜಿಲ್ಲೆಯ ಕಚೇರಿ ವಿಳಾಸ ಪ್ರಾಚಿಶಾಪ್ಪೆ ಕಟ್ಟಡ, 1ನೇ ಮಹಡಿ, ಕೃಷಿನಗರ, ವಾರ್ಡ್ ನಂ.1, ಸಾಯಿಬಾಬ ದೇವಸ್ಥಾನ ಬಳಿ, ಕೆಲ್ಗೇರಿ ರಸ್ತೆ -580001ರಲ್ಲಿ ಕಚೇರಿಯನ್ನು ತೆರೆಯಲಾಗಿದೆ. ಇಲ್ಲಿ ಮಹದಾಯಿ ಸಮಸ್ಯೆಗಳ ಹಿನ್ನಲೆಯಲ್ಲಿ ಬಂದ್ ಮತ್ತು ಮುಷ್ಕರ ಹೊರಹೊಮ್ಮಿದ ಹಿನ್ನೆಲೆಯಲ್ಲಿ ಉಂಟಾದಂತ ಆಸ್ತಿಪಾಸ್ತಿಗಳ ನಷ್ಟದ ಪರಿಹಾರ ಕೋರಿದ ಅರ್ಜಿಯನ್ನು ಸಲ್ಲಿಸಲು ಕಾಲಾವಕಾಶ ನೀಡಿದ್ದಾರೆ. ನೇರವಾಗಿ ಕಚೇರಿಗೆ ಭೇಟಿ ನೀಡಿ ಅಥವಾ mahadayicc22@gmail.com ಇ-ಮೇಲ್ ಮಾಡಿಯೂ ಪರಿಹಾರಕ್ಕೆ ಅರ್ಜಿ ಸಲ್ಲಿಸುವಂತೆ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಮಾಹಿತಿ ನೀಡಿದ್ದು, ಕರ್ನಾಟಕ ರಾಜ್ಯಾಧ್ಯಂತ ಜನವರಿ 25, 2018, ಫೆಬ್ರವರಿ 4, 2018 ಮತ್ತು ಏಪ್ರಿಲ್ 12, 2018ರಂದು ರಾಜ್ಯದ ನ್ಯಾಯವ್ಯಾಪ್ತಿಯಾದ್ಯಂತ ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗಳಿಗೆ ಉಂಟಾದ ನಷ್ಟ ಮತ್ತು ಹಾನಿಗಳನ್ನು ಅಂದಾಜು ಮಾಡಲು ಗೌರವಾನ್ವಿತ ಉಚ್ಚ ನ್ಯಾಯಾಲಯವು ನಿರ್ದೇಶನ ನೀಡಿದೆ ಎಂದಿದ್ದಾರೆ.