ಇಬ್ಬರು ವಯಸ್ಕ ಪುತ್ರಿಯರ ಜತೆ ನದಿಗೆ ಹಾರಿದ ತಾಯಿ; ಮೂವರ ಶವವೂ ಪತ್ತೆ

ಬಾಗಲಕೋಟೆ: ವಯಸ್ಸಿಗೆ ಬಂದ ಹೆಣ್ಣುಮಕ್ಕಳಿಬ್ಬರ ಸಹಿತ ತಾಯಿಯೊಬ್ಬರು ನದಿಗೆ ಹಾರಿದ ಪ್ರಕರಣವೊಂದು ನಡೆದಿದೆ. ಬಾಗಲಕೋಟೆ ಜಿಲ್ಲೆಯ ಮಲಪ್ರಭಾ ಸೇತುವೆ ಬಳಿ ಈ ಪ್ರಕರಣ ನಡೆದಿದ್ದು, ಡೆತ್ನೋಟ್ ಕೂಡ ಪತ್ತೆಯಾಗಿದೆ.
ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಸೂಳೇಬಾವಿ ಗ್ರಾಮದ ಉಮಾ ಸುರೇಶ ಮಾಸರೆಡ್ಡಿ (42) ಎಂಬಾಕೆ ತನ್ನ ಮಕ್ಕಳಾದ ಐಶ್ವರ್ಯ (23) ಹಾಗೂ ಸೌಂದರ್ಯ (19) ಅವರೊಂದಿಗೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪುತ್ರಿಯರಲ್ಲಿ ಐಶ್ವರ್ಯ ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಹಾಗೂ ಸೌಂದರ್ಯ ಬಾಗಲಕೋಟೆಯಲ್ಲಿ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದು, ತಾಯಿ ಡೆತ್ನೋಟ್ ಬರೆದಿಟ್ಟು, ಇಬ್ಬರೂ ಪುತ್ರಿಯರೊಂದಿಗೆ ನದಿಗೆ ಹಾರಿದ್ದರು. ಕೌಟುಂಬಿಕ ಸಮಸ್ಯೆಯಿಂದ ಈ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಅಗ್ನಿಶಾಮಕ ದಳದ ಸಿಬ್ಬಂದಿ ನದಿಯಲ್ಲಿ ಶವ ಪತ್ತೆ ಮಾಡಿದ್ದಾರೆ. ಡೆತ್ನೋಟ್ನಲ್ಲಿ ಏನಿದೆ ಎಂಬುವುದು ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ. ಅಮೀನಗಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.