ಬೆಂಗಳೂರಿನಲ್ಲಿ; ಪತಿ ಮೃತಪಟ್ಟು 15 ದಿನ ಕಳೆದರೂ ಆತನ ಅಂತಿಮ ದರ್ಶನ ಸಿಗದೆ ದೂರದ ಒಮನ್ ನಲ್ಲಿ ಪರದಾಡುತ್ತಿದ್ದ ಪತ್ನಿ ಕೊನೆಗೂ ತನ್ನ ತಾಯ್ನಾಡಿಗೆ ಮರಳಿದ್ದಾರೆ. ಬೆಂಗಳೂರು: ಬೆಂಗಳೂರಿನಲ್ಲಿ ಪತಿ ಮೃತಪಟ್ಟು 15 ದಿನ ಕಳೆದರೂ ಆತನ ಅಂತಿಮ ದರ್ಶನ ಸಿಗದೆ ದೂರದ ಒಮನ್ ನಲ್ಲಿ ಪರದಾಡುತ್ತಿದ್ದ ಪತ್ನಿ ಕೊನೆಗೂ ತನ್ನ ತಾಯ್ನಾಡಿಗೆ ಮರಳಿದ್ದಾರೆ.
ಮನೆಗೆಲಸಕ್ಕಾಗಿ ಒಂದು ವರ್ಷದ ಹಿಂದೆ ಒಮನ್ ಗೆ ಹೋಗಿದ್ದ ಇಬ್ಬರು ಪುತ್ರರಿರುವ 45 ವರ್ಷದ ರಾಜೇಶ್ವರಿ ಅಲ್ಲಿಯೇ ಸಿಲುಕಿದ್ದರು. ಈ ಮಧ್ಯೆ ಆಕೆಯ ಪತಿ ಅನಾರೋಗ್ಯದಿಂದ ಉತ್ತರ ಬೆಂಗಳೂರಿನ ಹೆಸರುಘಟ್ಟ ಬಳಿಯ ಮನೆಯೊಂದರಲ್ಲಿ ಸಾವನ್ನಪ್ಪಿದ್ದರು. ಶಾಲಾ ಬಸ್ ವೊಂದರ ಚಾಲಕನಾಗಿರುವ ಆಕೆಯ ಹಿರಿಯ ಪುತ್ರ ಆರ್. ಅರುಣ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿ, ಕಿಡ್ನಿ ಸಂಬಂಧಿತ ಕಾಯಿಲೆ ಮತ್ತು ಉಸಿರಾಟದ ತೊಂದರೆಯಿಂದಾಗಿ ತಂದೆ ಅನಾರೋಗ್ಯಕ್ಕೊಳಗಾಗಿದ್ದರು.
ಅಮ್ಮ ಬೆಂಗಳೂರಿಗೆ ಬಂದು ತಂದೆಗೆ ಹಾರೈಕೆ ಮಾಡದ ಹತಾಶೆಯಲ್ಲಿದ್ದರು. ಆದರೆ, ಒಮನ್ ತೊರೆಯಲು ಅವಕಾಶ ನೀಡಿರಲಿಲ್ಲ, ಅಕ್ಟೋಬರ್ 3 ರಂದು ತಂದೆ ಸಾವನ್ನಪ್ಪಿದರು. ಅಮ್ಮ ಬಂದು ತಂದೆಯ ಅಂತಿಮ ದರ್ಶನ ಪಡೆದು, ಕೆಲವೊಂದು ಸಂಪ್ರದಾಯ ನಡೆಸಲಿ ಎಂದು ಮೃತದೇಹವನ್ನು ಸಂರಕ್ಷಿಸಿಡಲಾಗಿದೆ ಎಂದು ತಿಳಿಸಿದರು. ಐಸ್ ಪ್ಯಾಕ್ ನಲ್ಲಿ ವಿಶೇಷ ಪೆಟ್ಟಿಗೆಯೊಂದರಲ್ಲಿ ಮನೆ ಬಳಿಯೇ ಮೃತದೇಹವನ್ನು ಕುಟುಂಬಸ್ಥರು ಇಟ್ಟಿದ್ದು, ಆಕೆಗಾಗಿ ಕಾಯುತ್ತಿರುವುದಾಗಿ ಅವರು ಹೇಳಿದರು.ರಾಜೇಶ್ವರಿ ಮಂಗಳವಾರ ರಾತ್ರಿ ಭಾರತಕ್ಕೆ ಮರಳಿರುವುದಾಗಿ ಸೌದಿ ಅರಬೀಯಾದಲ್ಲಿ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುವ ಉಡುಪಿಯ ಪಿಎ ಹಮಿದ್ ಪಡುಬಿದ್ರಿ ಫೋನ್ ಮೂಲಕ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ. ಆಕೆ ವಾಯ್ಸ್ ಮೇಸೆಜ್ ಕೂಡಾ ಕಳುಹಿಸಿದ್ದಾರೆ. ಭಾರತೀಯ ರಾಯಭಾರಿ ಅಧಿಕಾರಿಗಳಿಂದ ಟಿಕೆಟ್ ಮತ್ತು ಪ್ರಯಾಣದ ದಾಖಲೆ ಸಿಕ್ಕಿದ ನಂತರ ಆಕೆ ನಿರಾಳರಾದರು ಎಂದು ಅವರು ಹೇಳಿದರು. ಬೆಂಗಳೂರಿನ ಎಜೆಂಟ್ ಒಬ್ಬರಿಂದ ಟೂರಿಸ್ಟ್ ವೀಸಾ ಮೇಲೆ ಒಮನ್ ಗೆ ತೆರಳಿದ್ದರಿಂದ ರಾಜೇಶ್ವರಿ ಭಾರತಕ್ಕೆ ಮರಳಲು ತುಂಬಾ ತ್ರಾಸದಾಯಕವಾಯಿತು.
ಟೂರಿಸ್ಟ್ ವೀಸಾಕ್ಕೆ ಕೇವಲ ಒಂದು ತಿಂಗಳ ಮಾನ್ಯತೆ ಇರುತ್ತದೆ. ಅದನ್ನು ಗರಿಷ್ಠ ಮೂರು ತಿಂಗಳವರೆಗೂ ವಿಸ್ತರಿಸಬಹುದು, ಮತ್ತೆ 10 ದಿನಗಳ ವಿನಾಯಿತಿ ಇರುತ್ತದೆ. ಏಜೆಂಟ್ ಮಹಿಳೆಯನ್ನು ಒಮನ್ ನಲ್ಲಿ ಮತೋರ್ವ ಏಜೆಂಟ್ ಗೆ ಆಕೆಯನ್ನು ಹಸ್ತಾಂತರಿಸಿದ್ದು, ಆತ ಮಸ್ಕರ್ ಬಳಿಯ ಮನೆಯೊಂದರಲ್ಲಿ ಕೆಲಸಕ್ಕೆ ಕಳುಹಿಸಿದ್ದ. ಆದರೆ, 18 ಗಂಟೆಗಳ ಕೆಲಸ, ಅಸ್ತಮಾದಿಂದ ಒಮನ್ ತೊರೆಯಲು ಆಕೆ ಬಯಸಿದ್ದಳು.ಇದಕ್ಕಾಗಿ ತಿಂಗಳ ಹಿಂದೆ ಅವರು ಪರಾರಿ ಕೂಡಾ ಆಗಿದ್ದರು. ತನ್ನ ಲಗ್ಗೇಜ್ ನೊಂದಿಗೆ ಟ್ಯಾಕ್ಸಿ ಹತ್ತಿ ಅಲ್ಲಿಂದ 160 ಕಿ. ಮೀ. ದೂರವಿರುವ ಭಾರತೀಯ ರಾಯಭಾರಿ ಕಚೇರಿಯನ್ನು ತಲುಪಿದ್ದಳು.ಬೆಂಗಳೂರಿಗೆ ವಾಪಸ್ಸಾಗಲು ಕಾಗದ ಪತ್ರಗಳ ವಿಲೇವಾರಿಗಾಗಿ ಆಕೆ ಕಾಯುತ್ತಿದ್ದಳು. ಟೂರಿಸ್ಟ್ ವೀಸಾದಲ್ಲಿ ಧೀರ್ಘ ಕಾಲ ಉಳಿದಿದ್ದಕ್ಕಾಗಿ ಒಮನ್ ಸರ್ಕಾರಕ್ಕೆ 1 ಲಕ್ಷ ರೂ. ಪಾವತಿಸಬೇಕಾಗಿತ್ತು. ಆಕೆ ಪ್ರತಿದಿನವೂ ತನ್ನ ತಾಯ್ನಾಡಿಗೆ ಮರಳುವ ವಿಶ್ವಾಸದಲ್ಲಿದ್ದರು ಎಂದು ಆಕೆಯೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದ ವಕೀಲರು ವಿವರಿಸಿದರು.