ಲಖಿಂಪುರ್ ಹಿಂಸಾಚಾರ : ಪ್ರತಿಭಟನೆ ನಡೆಸಿದ ನವಜೋತ್ ಸಿಧು ಪೊಲೀಸರ ವಶಕ್ಕೆ

ಲಖಿಂಪುರ್ ಹಿಂಸಾಚಾರ : ಪ್ರತಿಭಟನೆ ನಡೆಸಿದ ನವಜೋತ್ ಸಿಧು ಪೊಲೀಸರ ವಶಕ್ಕೆ

ಲಖಿಂಪುರ್ ಹಿಂಸಾಚಾರದ ಬಗ್ಗೆ ವಿರೋಧ ಪಕ್ಷದ ನಾಯಕರು ಬಿಜೆಪಿಯನ್ನು ಖಂಡಿಸುತ್ತಲೇ ಇದ್ದಂತೆ, ಕಾಂಗ್ರೆಸ್ ಪಕ್ಷದ ಪರವಾಗಿ ನವಜೋತ್ ಸಿಂಗ್ ಸಿಧು ಚಂಡೀಗಢದ ರಾಜಭವನದ ಮುಂದೆ ಬೃಹತ್ ಪ್ರತಿಭಟನೆ ನಡೆಸಿದರು.

ಸಿಧು ಇತರ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರೊಂದಿಗೆ ಪಕ್ಷದ ಧ್ವಜಗಳನ್ನು ಹಿಡಿದು 'ರಾಜಕೀಯ ಪ್ರವಾಸೋದ್ಯಮ'ವನ್ನು ತಡೆಯುವ ಬಿಜೆಪಿ ನಿರ್ಧಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.ಇದೀಗ ನವಜೋತ್ ಸಿಧು ಅವರನ್ನು ಪಂಜಾಬ್ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

ಲಖನೌದಲ್ಲಿದ್ದಾಗ, ಸಮಾಜವಾದಿ ಪಕ್ಷದ ಕಾರ್ಯಕರ್ತರು ತಮ್ಮ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರನ್ನು ಜಿಲ್ಲೆಗೆ ಪ್ರವೇಶಿಸುವುದನ್ನು ನಿಷೇಧಿಸಿರುವ ಸಂಬಂಧ ಭಾರಿ ಪ್ರತಿಭಟನೆ ನಡೆಸಿದ್ದಾರೆ. ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರ ಬನ್ಬೀರ್ ಪುರ ಗ್ರಾಮಕ್ಕೆ ಭೇಟಿ ನೀಡಿದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವಾಗ ಪ್ರಾಣ ಕಳೆದುಕೊಂಡ ರೈತರಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿ ಲಕ್ನೋದ ತಮ್ಮ ನಿವಾಸದ ಮುಂದೆ ನಡೆದ ಧರಣಿಯಲ್ಲಿ ಕುಳಿತಿದ್ದ ಅಖಿಲೇಶ್ ಯಾದವ್ ಅವರನ್ನು ವಶಕ್ಕೆ ಪಡೆಯಲಾಗಿದೆ.

ಕಾಂಗ್ರೆಸ್ ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಟ್ವಿಟರ್ ನಲ್ಲಿ ಹೀಗೆ ಬರೆದಿದ್ದಾರೆ, 'ಈ ಅಮಾನವೀಯ ಹತ್ಯಾಕಾಂಡವನ್ನು ನೋಡಿದ ನಂತರವೂ ಮೌನವಾಗಿರುವವರು ಈಗಾಗಲೇ ಸತ್ತಿದ್ದಾರೆ. ಆದರೆ ಈ ತ್ಯಾಗವ್ಯರ್ಥಮಾಡಲು ನಾವು ಬಿಡುವುದಿಲ್ಲ - ಕಿಸಾನ್ ಸತ್ಯಾಗ್ರಹ ದೀರ್ಘಕಾಲ ಬಾಳಲಿ'. ಎಂದು ಟ್ವೀಟ್ ಮಾಡಿದ್ದಾರೆ.

ಘಟನೆಗೆ ಪ್ರತಿಕ್ರಿಯಿಸಿರುವ ಮಮತಾ ಬ್ಯಾನರ್ಜಿ, 'ಲಖಿಂಪುರ್ ಖೇರಿಯಲ್ಲಿ ನಡೆದ ಅನಾಗರಿಕ ಘಟನೆಯನ್ನು ನಾನು ಬಲವಾಗಿ ಖಂಡಿಸುತ್ತೇನೆ. ನಮ್ಮ ರೈತ ಸಹೋದರರ ಬಗ್ಗೆ ಬಿಜೆಪಿಯ ನಿರಾಸಕ್ತಿ ನನಗೆ ಆಳವಾಗಿ ನೋವುಂಟು ಮಾಡುತ್ತದೆ. ೫ ಎಐಟಿಸಿ ಸಂಸದರ ನಿಯೋಗವು ನಾಳೆ ಸಂತ್ರಸ್ತರ ಕುಟುಂಬಗಳಿಗೆ ಭೇಟಿ ನೀಡಲಿದ್ದಾರೆ. ನಮ್ಮ ರೈತರಿಗೆ ಯಾವಾಗಲೂ ನಮ್ಮ ಬೇಷರತ್ ಬೆಂಬಲ ವಿರುತ್ತದೆ'. ಎಂದಿದ್ದಾರೆ.