ಪಂಡರಾಪುರ- ಯಶವಂತಪುರ ರೈಲು ಸಂಚಾರ ಮರು ಆರಂಭ

ಪಂಡರಾಪುರ-ಯಶವಂತಪುರ ಮಧ್ಯೆ ಸಾಪ್ತಾಹಿಕ ವಿಶೇಷ ರೈಲು ಸಂಚಾರ ಪುನರಾರಂಭವಾಗಿದೆ.
ರೈಲು ಸಂಖ್ಯೆ 06217/06218 ಪಂಡರಾಪುರ-ಯಶವಂತಪುರ ರೈಲು ಮರು ಸಂಚಾರ ಪ್ರಾರಂಭಿಸುತ್ತದೆ. ಈ ರೈಲು ಸಾಪ್ತಾಹಿಕ ವಿಶೇಷವಾಗಿದ್ದು, ಮೊದಲ ಸಂಚಾರ ನ.11ರಂದು ಯಶವಂತಪುರದಿಂದ ಪ್ರಾರಂಭವಾಗುತ್ತದೆ.
ಯಶವಂತಪುರ ನಿಲ್ದಾಣದಿಂದ ಸಂಜೆ 6.15ಕ್ಕೆ ರೈಲು ಹೊರಟು ಮರುದಿನ ಬೆಳಗ್ಗೆ 11.25ಕ್ಕೆ ಪಂಡರಾಪುರ ತಲುಪುತ್ತದೆ. ಮರಳಿ ಅದೇ ರೈಲು ಪಂಡರಾಪುರದಿಂದ ನ.12ರಂದು ಮಧ್ಯಾಹ್ನ 1.35ಕ್ಕೆ ಹೊರಟು ಮರುದಿನ ಬೆಳಗ್ಗೆ ಬೆಳಗ್ಗೆ 6.10ಕ್ಕೆ ಯಶವಂತಪುರ ತಲುಪುತ್ತದೆ.
ಈ ರೈಲು ಯಶವಂತಪುರ, ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ಹಾವೇರಿ, ಎನ್‌ಎಸ್‌ಎಸ್ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಮೀರಜ್, ಸಂಗೋಲಾ ಮಾರ್ಗವಾಗಿ ಪಂಡರಾಪುರ ತಲುಪುತ್ತದೆ.
ಈ ರೈಲಿನಲ್ಲಿ ಒಂದು ಎಸಿ ಪ್ರಥಮ ದರ್ಜೆ, ಎರಡು ಎಸಿ ಎರಡನೇ ದರ್ಜೆ, ನಾಲ್ಕು ಎಸಿ ಮೂರನೇ ದರ್ಜೆ, ಏಳು ಸ್ಲೀಪರ್ ಕ್ಲಾಸ್ ಹಾಗೂ ನಾಲ್ಕು ಸಾಮಾನ್ಯ ದರ್ಜೆ ಕೋಚ್‌ಗಳು ಇರುತ್ತವೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.
ಮೈಸೂರಿನಿಂದ ದೆಹಲಿಗೆ ವಿಶೇಷ ರೈಲು:
ಮೈಸೂರು ಹಾಗೂ ಹಜರತ್ ನಿಜಾಮುದ್ದೀನ್ ಮಧ್ಯೆ ಸಾಪ್ತಾಹಿಕ ವಿಶೇಷ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಸಂಚಾರ ಆರಂಭಿಸಲಾಗಿದೆ.
ರೈಲು ಸಂಖ್ಯೆ 06215/06216 ನ.12ರಂದು ಮೈಸೂರಿನಿಂದ ರಾತ್ರಿ 8.10ಕ್ಕೆ ಹೊರಡುತ್ತದೆ. ನ.14ರಂದು ಸಂಜೆ 5.50ಕ್ಕೆ ಹಜರತ್ ನಿಜಾಮುದ್ದೀನ್ ನಿಲ್ದಾಣ ತಲುಪುತ್ತದೆ. ಮರಳಿ ನ.15ರಂದು ಬೆಳಗ್ಗೆ 5.10ಕ್ಕೆ ಹೊರಟು ನ.17ರ ಬೆಳಗಿನ ಜಾವ 3.30ಕ್ಕೆ ಮೈಸೂರು ತಲುಪುತ್ತದೆ.
ಈ ರೈಲು ಮೈಸೂರು, ಹಾಸನ, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ರಾಣೆಬೆನ್ನೂರು, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಮೀರಜ್, ಸಾಂಗ್ಲಿ, ಸತಾರ, ಪುಣೆ, ಅಹ್ಮದ್‌ನಗರ, ಬೇಲಾಪುರ, ಕೋಪರ್‌ಗಾಂವ್, ಮನ್ಮಾಡ್, ಇಟಾರ್ಸಿ, ಭೋಪಾಲ್, ಝಾನ್ಸಿ, ಗ್ವಾಲಿಯರ್, ಆಗ್ರಾ, ಮಥುರಾ ಮೂಲಕ ದೆಹಲಿಯ ಹಜರತ್ ನಿಜಾಮುದ್ದೀನ್ ನಿಲ್ದಾಣ ತಲುಪುತ್ತದೆ.
ಈ ರೈಲಿನಲ್ಲಿ ಎರಡು ಎಸಿ ಎರಡನೇ ದರ್ಜೆ, ಐದು ಎಸಿ ಮೂರನೇ ದರ್ಜೆ, ಏಳು ಸ್ಲೀಪರ್ ಕ್ಲಾಸ್, ಎರಡು ಸಾಮಾನ್ಯ ದರ್ಜೆ ಕೋಚ್‌ಗಳು ಇರಲಿವೆ.
ಛಟ್ ಪೂಜಾ ನಿಮಿತ್ತ ವಿಶೇಷ ರೈಲು:
ಛಟ್ ಪೂಜಾ ನಿಮಿತ್ತ ಬಿಹಾರದ ದಾನಾಪುರದಿಂದ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ಹಬ್ಬದ ವಿಶೇಷ ಎಕ್ಸ್‌ಪ್ರೆಸ್ ರೈಲು ಒಂದು ಬಾರಿ ಸಂಚರಿಸುತ್ತದೆ.
ರೈಲು ಸಂಖ್ಯೆ 03697/03698 ನ.15ರಂದು ಸಂಜೆ 6.10ಕ್ಕೆ ದಾನಾಪುರದಿಂದ ಹೊರಟು ನ.17ರ ಸಂಜೆ 5.25ಕ್ಕೆ ಕೆಎಸ್‌ಆರ್ ನಿಲ್ದಾಣ ತಲುಪುತ್ತದೆ. ಮರಳಿ ನ.18ರಂದು ಬೆ.7.30 ಕೆಎಸ್‌ಆರ್ ನಿಲ್ದಾಣದಿಂದ ಹೊರಟು ನ.20ರ ಬೆಳಗ್ಗೆ 4.30ಕ್ಕೆ ದಾನಾಪುರ ತಲುಪುತ್ತದೆ ಎಂದು ಪ್ರಕಟಣೆ ತಿಳಿಸಿದೆ.