ಗಣೇಶೋತ್ಸವ ಷರತ್ತುಗಳಿಗೆ ವಿರೋಧ : ಹಿಂದೂಪರ ಸಂಘಟನೆಗಳಿಂದ ಬಿಬಿಎಂಪಿಗೆ ಮುತ್ತಿಗೆ

ಗಣೇಶೋತ್ಸವ ಷರತ್ತುಗಳಿಗೆ ವಿರೋಧ : ಹಿಂದೂಪರ ಸಂಘಟನೆಗಳಿಂದ ಬಿಬಿಎಂಪಿಗೆ ಮುತ್ತಿಗೆ

ಬೆಂಗಳೂರು :ಸಾರ್ವಜನಿಕ ಗಣೇಶೋತ್ಸವ ಹಿನ್ನೆಲೆ ಬಿಬಿಎಂಪಿ ವಿಧಿಸಿರುವ ನಿಯಮಗಳನ್ನು ವಿರೋಧಿಸಿ ಇಂದು ಕೆಲ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಬಿಬಿಎಂಪಿಗೆ ಮುತ್ತಿಗೆ ಹಾಕಿವೆ.

ಕೊರೊನಾ ಮೂರನೇ ಅಲೆ ಭೀತಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸಾರ್ವಜನಿಕ ಗಣೇಶೋತ್ಸವಕ್ಕೆ ಷರತ್ತುಬದ್ಧ ಅನುಮತಿ ನೀಡಿದೆ. ಆದರೆ, ಬೆಂಗಳೂರಿನಲ್ಲಿ ಬಿಬಿಎಂಪಿ ಐದು ದಿನಗಳ ಬದಲಾಗಿ ಮೂರು ದಿನಗಳಿಗೆ ಗಣೇಶೋತ್ಸವ ಸೀಮಿತಗೊಳಿಸಿದೆ, ಜೊತೆಗೆ ಇತರೇ ಕಟ್ಟುನಿಟ್ಟಿನ ಕ್ರಮಗಳನ್ನು ವಿಧಿಸಿದೆ. ಇದು ಹಿಂದೂಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಭಜರಂಗದಳ, ವಿ ಎಚ್ ಪಿ, ಹಿಂದೂ ಜಾಗರಣ ವೇದಿಕೆ ಸೇರಿದಂತೆ ಇತರೇ ಸಂಘಟನೆಗಳ ಕಾರ್ಯಕರ್ತರು ಬಿಬಿಎಂಪಿ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು.

ಹಿಂದೂ ಧಾರ್ಮಿಕತೆಗೆ ಸಂಬಂಧಿಸಿದಂತೆ ಹಸ್ತಕ್ಷೇಪ ಮಾಡಲು ಯಾರಿಗೂ ಅಧಿಕಾರವಿಲ್ಲ. ಗಣೇಶ ಮೂರ್ತಿ ಇಷ್ಟೇ ಅಡಿ ಎತ್ತರ ಇರಬೇಕೆಂದು ನಿಯಮ ವಿಧಿಸುವುದು ಎಷ್ಟು ಸರಿ ಎಂದು ಕಿಡಿಕಾರಿದರು. ಅಲ್ಲದೇ, ಬಿಬಿಎಂಪಿ ಏನೇ ಆದೇಶ ಹೊರಡಿಸಿದರೂ, ಸಾಂಪ್ರದಾಯಿಕ ರೀತಿಯಲ್ಲೇ ಹಬ್ಬ ಆಚರಣೆಗೆ ಅವಕಾಶ ಮಾಡಿಕೊಡುವಂತೆ ಒತ್ತಾಯಿಸಿದರು. ಅಲ್ಲದೇ, ಹಿಂದೂ ವಿರೋಧಿ ಬಿಬಿಎಂಪಿ ಎಂದು ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ಹೊರಹಾಕಿದವು…..