ಸರಳ ರೀತಿಯಲ್ಲಿರಲಿ ಗಣೇಶೋತ್ಸವ | Annigeri |
ಅಣ್ಣೀಗೇರಿ ನಗರದ ಜನಸ್ನೇಹಿ ಪೆÇಲೀಸ್ ಠಾಣೆಯ ಪಿಎಸ್‍ಐ ಲಾಲಸಾಬ್ ಜೂಲಕಟ್ಟಿ ಗಣೇಶ ಹಬ್ಬವನ್ನು ಸರಳ ಹಾಗೂ ಸರ್ಕಾರದ ಸೂಚನೆಯಂತೆ ಆಚರಣೆ ಮಾಡಬೇಕು ಎಂದು ಹೇಳಿದರು. ಅನ್ನಸಂತರ್ಪಣೆ, ಡಿಜೆ ಸೌಂಡ್, ಮೆರವಣಿಗೆ ಹಾಗೂ ಸಮಾರಂಭಗಳಿಗೆ ನಿμÉೀಧ ಹೇರಲಾಗಿದೆ. ನಗರ ಸೇರಿದಂತೆ ತಾಲೂಕಿನ ಸಾರ್ವಜನಿಕ ಸ್ಥಳಗಳಲ್ಲಿ ಐದು ದಿನ ಮಾತ್ರ ಗಣೇಶನ ಮೂರ್ತಿ ಪ್ರತಿμÁ್ಠಪನೆ ಮಾಡಬೇಕು. ಕೊರೋನಾ ತಡೆಗಟ್ಟಲು ನಮ್ಮ ನಿಮ್ಮೆಲ್ಲರ ಸಹಕಾರ ಅತಿ ಮುಖ್ಯವಾಗಿರುತ್ತದೆ ಎಂದರು. ಸಿಪಿಐ ಮಠಪತಿ ಮಾತನಾಡಿ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶನ ಮೂರ್ತಿ ಪ್ರತಿμÁ್ಠಪನೆ ಮಾಡುವರು ಸ್ಥಳೀಯರಿಂದ ಕಡ್ಡಾಯವಾಗಿ ಅನುಮತಿಯನ್ನು ಪಡೆಯಬೇಕು ಎಂದರು. ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿ ಮಂಜುನಾಥ್ ಅಮಾಸೆ, ಷಣ್ಮುಖ ಗುರಿಕಾರ, ಶಿವಯೋಗಿ ಸುರಕೋಡ ಹಾಗೂ ನಗರದ ಗಣ್ಯರು ಉಪಸ್ಥಿತರಿದ್ದರು.