ಕೊರಿಯರ್​ ಬಾಕ್ಸ್​ನಲ್ಲಿತ್ತು ಬುಸ್​.. ಬುಸ್​.. ನಾಗಪ್ಪ: ಬೆಂಗಳೂರು ಟು ನಾಗಪುರಕ್ಕೆ ಹೋಗಿತ್ತು ಹಾವು!

ಕೊರಿಯರ್​ ಬಾಕ್ಸ್​ನಲ್ಲಿತ್ತು ಬುಸ್​.. ಬುಸ್​.. ನಾಗಪ್ಪ: ಬೆಂಗಳೂರು ಟು ನಾಗಪುರಕ್ಕೆ ಹೋಗಿತ್ತು ಹಾವು!
ಕೆಲವೊಂದು ಘಟನೆಗಳನ್ನು ನೋಡಿದರೆ ಇದು ಸಾಧ್ಯನಾ ಎಂಬ ಪ್ರಶ್ನೆ ಮೂಡುತ್ತೆ. ಹೌದು ಇಲ್ಲೂ ಒಂದು ಆಘಾತಕಾರಿ ಘಟನಡೆ ನಡೆದಿದೆ. ಅದೇನಪ್ಪಾ ಅಂದರೆ ಬೆಂಗಳೂರಿ(Bengaluru)ನಿಂದ ನಾಗಪುರ(Nagpur)ಕ್ಕೆ ಕೊರಿಯರ್(Courier)​ ಆಗಿದ್ದ ಬಾಕ್ಸ್(Box)​ವೊಂದರಲ್ಲಿ ನಾಗರಹಾವ(Cobra)ನ್ನು ಪಾರ್ಸೆಲ್​ ಮಾಡಲಾಗಿದೆ.
ಹೌದು, ನಂಬಲು ವಿಚಿತ್ರ ಅನ್ನಿಸಿದರು ಇದು ಸತ್ಯ. ನಾಗಪುರದ ನೇಶ್ವರ ನಗರದಲ್ಲಿ ವಾಸಿಸುತ್ತಿರುವ ಸುನೀಲ್ ಲಖೆಟೆ(Sunil Lakhete) ಅವರ ಕುಟುಂಬಕ್ಕೆ ಈ ಘಟನೆ ನಡೆದಿದೆ. ಹೆಸರಾಂತ ಕೊರಿಯರ್ ಕಂಪನಿಯೊಂದರ ಮೂಲಕ ಸುನೀಲ್ ಮನೆಗೆ ಬೆಂಗಳೂರಿನಿಂದ ಎಂಟು ಬಾಕ್ಸ್ ಗಳನ್ನು ತಲುಪಿಸಲಾಗಿತ್ತು. ಈ 8 ಬಾಕ್ಸ್​ನಲ್ಲಿ ಒಂದು ಬಾಕ್ಸ್​ ಒಳಗೆ ನಾಗರ ಹಾವು ಇದ್ದುದನ್ನು ಕಂಡು ಕುಟುಂಬಸ್ಥರು ದಂಗಾಗಿ ಹೋಗಿದ್ದರು. ಈ ಬಾಕ್ಸ್‌ಗಳಲ್ಲಿ ಬೆಂಗಳೂರು ಮೂಲದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸುನೀಲ್ ಲಖೆಟೆ ಅವರ ಮಗಳ ವಸ್ತುಗಳು ಇದ್ದವು. ಕೋವಿಡ್​(Covid)ನಿಂದಾಗಿ ಅವರ ಮಗಳಿಗೆ ವರ್ಕ್​ ಫ್ರಂ ಹೋಮ್(Work From Home)​ ಇತ್ತು. ಹೀಗಾಗಿ ಬೆಂಗಳೂರಿನಲ್ಲಿದ್ದ ಮನೆ ಖಾಲಿ ಮಾಡಲು ನಿರ್ಧರಿಸಿದ್ದರು. ಹೀಗಾಗಿ ಹೆಸರಾಂತ ಕೊರಿಯರ್​ ಕಂಪನಿಯನ್ನು ಸಂಪರ್ಕಿಸಿ ತನ್ನ ವಸ್ತುಗಳನ್ನ ತರಿಸಿಕೊಳ್ಳಲಾಗಿತ್ತು.

ಬಾಕ್ಸ್ ಓಪನ್​ ಮಾಡುತ್ತಿದ್ದಂತೆ ಕೇಳಿಸತ್ತು ಹಾವಿನ ಸಿಳ್ಳೆ ಸದ್ದು!

ಸುನೀಲ್ ಮಗಳ ಸಾಮಾನುಗಳನ್ನು ಎಂಟು ಬಾಕ್ಸ್ ಗಳಲ್ಲಿ ತುಂಬಿ ಪರಿಚಯಸ್ಥರು ಕೊರಿಯರ್​ ಮಾಡಿದ್ದಾರೆ. ಬೆಂಗಳೂರಿನಿಂದ ನಾಗಪುರದಲ್ಲಿದ್ದ ಸುನೀಲ್​ ಮನೆಯವರಿಗೆ ಕೊರಿಯರ್​ ಬಂದಿತ್ತು. ಬಾಕ್ಸ್‌ಗಳನ್ನು ಓಪನ್​ ಮಾಡುತ್ತಿದ್ದಂತೆ ಹಾವಿನ ಸಿಳ್ಳೆ ಸದ್ದು ಎಲ್ಲರನ್ನು ಬೆದರಿಸಿತು. ಎಲ್ಲಿಂದ ಶಬ್ಧ ಬರುತ್ತಿದೆ ಅಂತ ಅವರು ಅರ್ಥ ಮಾಡಿಕೊಳ್ಳುವಷ್ಟರಲ್ಲಿ ನಾಗರಹಾವೊಂದು ಪೆಟ್ಟಿಗೆಯಿಂದ ಹೊರಬಂದಿತ್ತು. ಇದನ್ನು ಕಂಡ ಕುಟುಂಬಸ್ಥರು ಹೌಹಾರಿದ್ದಾರೆ. ಆ ನಾಗರಹಾವು ಹೊರಬಂದು ಮನೆಯ ಸಮೀಪವಿರುವ ಚರಂಡಿಗೆ ಹೋಗಿದೆ. ಕೂಡಲೇ ಮನೆಯವರು ಹಾವು ಹಿಡಿಯುವವರಿಗೆ ಕರೆ ಮಾಡಿದ್ದರು. ಅಷ್ಟರಲ್ಲಿ ಆ ಹಾವು ಅಲ್ಲಿಂದ ಮಾಯವಾಗಿತ್ತು.


ಬಾಕ್ಸ್​ನೊಳಗೆ ನಾಗರಹಾವು ಬಂದಿದ್ದು ಹೇಗೆ?

ಈ ಬಾಕ್ಸ್‌ನೊಳಗೆ ನಾಗರಹಾವು ಹೇಗೆ ಬಂತು ಎಂಬುದು ಸ್ಪಷ್ಟವಾಗಿಲ್ಲ. ಹಾವು ಹೊರಬಂದ ಬಾಕ್ಸ್‌ನಲ್ಲಿ ರಂಧ್ರಗಳಿದ್ದು, ಬೆಂಗಳೂರಿನಲ್ಲಿ ಪ್ಯಾಕ್ ಮಾಡಿದ ನಂತರ ಅಥವಾ ನಾಗ್ಪುರದ ಕೊರಿಯರ್ ಕಂಪನಿಯ ಗೋಡೌನ್‌ನಲ್ಲಿ ಬಾಕ್ಸ್ ಬಿದ್ದಿರುವಾಗ ಅದು ಬಾಕ್ಸ್‌ಗೆ ಪ್ರವೇಶಿಸಿರಬಹುದು ಎಂದು ಹೇಳಲಾಗಿದೆ. ಆದರೂ ಮನೆಯ ಐಟಂ ಅಂತ ಬಾಕ್ಸ್​ ಓಪನ್​ ಮಾಡಿದರವರಿಗೆ ಹಾವು ಕಂಡು ಒಂದು ಕ್ಷಣ ಹೃದಯ ಬಾಯಿಗೆ ಬಂದಿದ್ದಂತು ನಿಜ. ಈ ಬಗ್ಗೆ ಬೆಂಗಳೂರಿನಿಂದ ಸಾಮಾಗ್ರಿಗಳನ್ನು ಪ್ಯಾಕ್​ ಮಾಡಿದ ಸಂಬಂಧಿಕರಿಗೆ ಕರೆ ಮಾಡಿ ವಿಚಾರಿಸಿದ್ದಾರೆ. ಅವರು ಇದು ಹೇಗೆ ಸಾಧ್ಯ ಎಂದು ಶಾಕ್​ಆಗಿದ್ದರಂತೆ.

ಈ ಹಿಂದೆಯೂ ಕೊರಿಯರ್​ ಸಂದರ್ಭದಲ್ಲಿ ಕೆಲ ಯಡವಟ್ಟುಗಳು ನಡೆದಿದೆ. ಅಕ್ಟೋಬರ್​ 30ರಂದು ಕೇರಳದ ವಯನಾಡಿನ ಕನಿಯಾಂಬೆಟ್ಟ ಹಳ್ಳಿಯ ನಿವಾಸಿ ಮಿಥುನ್​ ಬಾಬಾ ಎಂಬುವವರು ಅಮೇಜಾನ್​ನಲ್ಲಿ ಪಾಸ್​​ಪೋರ್ಟ್​ ಪೌಚ್​ಗಾಗಿ ಆರ್ಡರ್​ ಮಾಡಿದ್ದರು. ಎರಡು ದಿನಗಳ ಬಳಿಕ ಆ ಪ್ರಾಡೆಕ್ಟ್​ ಕೈಸೇರುವುದಾಗಿ ಅಮೇಜಾನ್ ತಿಳಿಸಿತ್ತು. ನವೆಂಬರ್​ 1ರಂದು ಅಮೇಜಾನ್​ನಿಂದ ಡೆಲಿವರಿ ಕೂಡ ಆಯ್ತು. ಆದರೆ ಆ ಪಾರ್ಸೆಲ್​ ಓಪನ್​ ಮಾಡಿ ನೋಡಿದರೆ, ಅದರಲ್ಲಿ ಮತ್ತೊಬ್ಬರ ಪಾಸ್​ಪೋರ್ಟ್ ಇತ್ತು. ಮೊದಲು ಇದನ್ನು ಕಂಡ ಮಿಥುನ್​ ಬಾಬಾ, ಇದೊಂದು ಡಮ್ಮಿ ಪಾಸ್​ಪೋರ್ಟ್ ಎಂದು ಸುಮ್ಮನಾದರು. ಹೊಸ ಪೌಚ್​ನೊಳಗೆ ಡಮ್ಮಿ ಪಾಸ್​ಪೋರ್ಟ್​ ಇಟ್ಟು ಕಳಿಸಿದ್ದಾರೆ ಅಂದುಕೊಂಡಿದ್ದರು. ಆ ಪಾಸ್​ಪೋರ್ಟ್ ಓಪನ್​ ಮಾಡಿ ನೋಡಿದ ಬಳಿಕ ಅದು ನಿಜವಾದ ಮತ್ತೊಬ್ಬರ ಪಾಸ್​ಪೋರ್ಟ್ ಎಂದು ತಿಳಿದುಬಂದಿತ್ತು.