ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಾಂ ಅವರ ಆರೋಗ್ಯ ಸ್ಥಿತಿ ಗಂಭೀರ | Bengaluru | 9live News |

ಬೆಂಗಳೂರಿನ ಹೊರವಲಯದಲ್ಲಿ ಕಾರು ಅಪಘಾತಕ್ಕೆ ಒಳಗಾದ ಹಿರಿಯ ಕನ್ನಡ ಚಿತ್ರ ರಂಗದ ನಟ ಶಿವರಾಮ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಮೂರು ದಿನಗಳ ಹಿಂದೆಯಷ್ಟೇ ನಟ ಶಿವರಾಮ ಅವರ ಕಾರು ಅಪಘಾತ ಸಂಭವಿಸಿತ್ತು.ಕಾರು ಅಪಘಾತದಲ್ಲಿ ನಟ ಶಿವರಾಂ ತೀವ್ರ ಗಾಯಗೊಂಡಿದ್ದರು. ಅದಾದ ಬೆನ್ನಲ್ಲೇ ಅಯ್ಯಪ್ಪ ಸ್ವಾಮಿ ಪೂಜೆಗೆ ಎಂದು ತೆರಳಿದ್ದ ಶಿವರಾಂ ಜಾರಿ ಬಿದ್ದ ಪರಿಣಾಮ ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದು ಮೆದುಳಿನಲ್ಲಿ ರಕ್ತಸ್ರಾವ ಉಂಟಾಗಿ ಮೆದುಳು ನಿಷ್ಕ್ರಿಯಗೊಂಡಿದೆ. ಅವರ ಆರೋಗ್ಯ ಸ್ಥಿತಿ ಈಗ ಗಂಭೀರವಾಗಿದೆ. ನಟ ಶಿವರಾಂ ಅವರನ್ನು ಹೊಸಕೆರೆಹಳ್ಳಿಯ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ನಟ ಶಿವರಾಂ ಅವರ ಸ್ಥಿತಿ ಚಿಂತಾಜನಕವಾಗಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ ಎಂದು ಖಾಸಗಿ ಆಸ್ಪತ್ರೆಯ ವೈದ್ಯ ಡಾ.ಮೋಹನ್ ಹೇಳಿದ್ದಾರೆ. ಹಿರಿಯ ನಟ ಶಿವರಾಂ ಕನ್ನಡ ಚಿತ್ರರಂಗದಲ್ಲಿ ‘ಶಿವರಾಮಣ್ಣ ಅಂತಲೇ ಹೆಸರುವಾಸಿ. ಚಿಕ್ಕವಯಸ್ಸಿನಲ್ಲೇ ನಟನೆಯತ್ತ ಆಸಕ್ತಿ ಬೆಳೆಸಿಕೊಂಡ ಶಿವರಾಂ ನಾಟಕಗಳಲ್ಲಿ ಅಭಿನಯಿಸಲು ಆರಂಭಿಸಿದರು. ಸೀತಾರಾಮಶಾಸ್ತ್ರಿ ಅವರಿಗೆ ಸಹಾಯಕರಾಗಿ ಕೆಲಸ ಮಾಡುವ ಮೂಲಕ ಕನ್ನಡ ಚಿತ್ರರಂಗಕ್ಕೆ ಶಿವರಾಂ ಪದಾರ್ಪಣೆ ಮಾಡಿದರು. ಕೆ.ಎಸ್.ಎಲ್.ಸ್ವಾಮಿ, ಗೀತಪ್ರಿಯ, ಸಿಂಗೀತಂ ಶ್ರೀನಿವಾಸ್ರಾವ್ ಮತ್ತು ಪುಟ್ಟಣ್ಣ ಕಣಗಾಲ್ರಿಗೆ ಶಿವರಾಂ ಸಹಾಯಕ ನಿರ್ದೇಶಕರಾಗಿದ್ದರು ಶರಪಂಜರ ನಾಗರಹಾವು ಶುಭಮಂಗಳ ಬಂಗಾರದ ಪಂಜರ ಚಲಿಸುವ ಮೋಡಗಳು ಶ್ರಾವಣ ಬಂತು ಹಾಲು ಜೇನು ಹೊಂಬಿಸಿಲು ಗುರು ಶಿಷ್ಯರು ಮುಂತಾದ ಅನೇಕ ಸಿನಿಮಾಗಳಲ್ಲಿ ಶಿವರಾಂ ಪೋಷಕ ಪಾತ್ರ ನಿರ್ವಹಿಸಿದ್ದಾರೆ. ಸ್ಯಾಂಡಲ್ವುಡ್ನಲ್ಲಿ ನಟರಾಗಿ, ನಿರ್ಮಾಪಕರಾಗಿ, ನಿರ್ದೇಶಕರಾಗಿಯೂ ಶಿವರಾಂ ಗುರುತಿಸಿಕೊಂಡಿದ್ದಾರೆ. ಹಿರಿಯ ಕಲಾವಿದ ಶಿವರಾಮ್ ಬೇಗ ಗುಣಮುಖರಾಗಲಿ ಎಂದು 9ಲೈವ್ ಹಾರೈಸಲಿದೆ