ಬೈಕ್ ರ್ಯಾಲಿ ಮೂಲಕ ಕಾನೂನು ಅರಿವು ಜಾಗೃತಿ
ಕಾನೂನು ಪ್ರಾಧಿಕಾರ ನಿಧೇರ್ಶನದಂತೆ ಚಾಮರಾಜನಗರದಲ್ಲಿ ಜಿಲ್ಲಾ ಕಾನೂನು ಪ್ರಾಧಿಕಾರ ಹಾಗೂ ವಕೀಲರ ಸಂಘದ ಸಹಕಾರದೊಂದಿಗೆ ಚಾಮರಾಜನಗರದ ಶ್ರೀ ಚಾಮರಾಜೇಶ್ವರ ದೇವಾಲಯದ ಮುಂಭಾಗದಲ್ಲಿ ಜಿಟಿ ಜಿಟಿ ಮಳೆಯಲ್ಲೂ ನ್ಯಾಯಾದೀಶರು, ವಕೀಲರು ಬೈಕ್ ರ್ಯಾಲಿ ಮೂಲಕ ಕಾನೂನು ಅರಿವು ಜಾಗೃತಿ ಜಾಥಾ ನಡೆಸಿದರು. ಈ ವೇಳೆ ಮಾತನಾಡಿ, ಕಾನೂನಿನ ಅರಿವು ಪ್ರತಿಯೊಬ್ಬರಲ್ಲೂ ಇರಬೇಕು, ಕಾನೂನಿನಲ್ಲಿ ಪ್ರತಿಯೊಬ್ಬರಿಗೂ ನ್ಯಾಯಯುತ ರಕ್ಷಣೆ ಸಿಗಲಿದೆ, ಗ್ರಾಮಾಂತರ ಪ್ರದೇಶದಲ್ಲಿ ಕಾನೂನಿನ ಅರಿವು ಹೆಚ್ಚಾಗಿ ಆಗಬೇಕಾಗಿದ್ದು, ಈ ನಿಟ್ಟಿನಲ್ಲಿ ಚಾಮರಾಜನಗರ ಜಿಲ್ಲೆಯ 507 ಗ್ರಾಮಗಳಲ್ಲೂ ಕಾನೂನಿನ ಅರಿವು ಮೂಡಿಸಲಾಗುತ್ತಿದೆ ಎಂದರು.