ಸುಭಿಕ್ಷ ಕರ್ನಾಟಕ ನಿರ್ಮಾಣಕ್ಕೆ ಮೊದಲ ಆದ್ಯತೆ- ಸಿಎಂ ಬೊಮ್ಮಾಯಿ

ಸುಭಿಕ್ಷಿತವಾದ, ಸಂಪತ್ ಭರಿತವಾದ ನಾಡು ಕಟ್ಟುವುದು ನನ್ನ ಆದ್ಯತೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು. ಕೊಪ್ಪಳದಲ್ಲಿಂದು ಜನ ಸ್ವರಾಜ್ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಅಭಿವೃದ್ದಿ ಕಾರ್ಯ ಕೈಗೆತ್ತಿಕೊಂಡು, ಅಭಿವೃದ್ದಿ ಸಾಧಿಸಲು ಗಮನ ಹರಿಸುವೆ.ಕಾಂಗ್ರೆಸ್ ಸುಳ್ಳು ಆರೋಪಗಳಿಗೆ ಉತ್ತರ ಕೊಡಲು ನನಗೆ ಆಸಕ್ತಿ ಇಲ್ಲ.ಸಮಾಜದ ಕಟ್ಟ ಕಡೆಯ ಮನುಷ್ಯನಿಗೆ ಎಲ್ಲ ರೀತಿಯ ಸೌಕರ್ಯ, ಸೌಲಭ್ಯ ಒದಗಿಸಲು ನಾನು ಆಧ್ಯತೆ ನೀಡುವೆ.ಮುಂದಿನ ದಿನಗಳಲ್ಲಿರಾಜ್ಯಕ್ಕೆ 5ಲಕ್ಷ ಮನೆ ಮಂಜೂರಿ ಮಾಡುವೆ, 75ಸಾವಿರ ಎಸ್.ಸಿ/ಎಸ್.ಟಿ ಮಕ್ಕಳಿಗೆ ಕೌಶಲ್ಯ ತರಭೇತಿ ನೀಡಲಾಗುತ್ತಿದೆ ಎಂದರು. ಅಧಿಕಾರ ವಿಕೇಂದ್ರೀಕರಣಕ್ಕೆ ಕಾಂಗ್ರೆಸ್ ವಿರೋಧಿಯಾಗಿದೆ. ಆದರೆ, ಬಿಜೆಪಿ ಅಧಿಕಾರ ವಿಕೇಂದ್ರೀಕರಣಕ್ಕೆ ಬೆಂಬಲ ನೀಡುತ್ತದೆ ಎಂದರು. ಬಿಟ್ ಕಾಯಿನ್ ಹಗರಣ ಕಾಂಗ್ರೆಸ್ ಸರಕಾರದ ಅವಧಿಯಾದ 2016ರಲ್ಲಿ ನಡೆದಿದೆ. ಆದರೆ ಅದನ್ನು ಮುಚ್ಚಿಡಲಾಗಿದೆ.ಅದನ್ನು ಮುಚ್ಚಿಟ್ಟವರಾರು, ಅದನ್ನು ಮುಚ್ಚಿಟ್ಟೇದ್ದಕೆ? ಹಗರಣಕಾರರನ್ನು ಬಿಟ್ಪಿ ದ್ದೇಕೆ? ಈಗ ನಾವು ಬಯಲು ಮಾಡಿದ್ದೇವೆ.ಕಾಂಗ್ರೆಸ ಮುಚ್ಚಿಟ್ಟದ್ದನ್ನು ಬಯಲು ಮಾಡಿದ್ದು ಬಿಜೆಪಿ ಸರಕಾರ, ತನಿಖೆಯಲ್ಲಿ ಎಲ್ಲ ಸತ್ಯ ಬಯಲಾಗಲಿದೆ. ನಮ್ಮ ಆದ್ಯತೆ ಅಭಿವೃದ್ದಿಗೆ, ಜನರಿಗೆ ನಾವು ಉತ್ತರದಾಯಿಗಳು, ಕಾಂಗ್ರೆಸ್ಸಿಗೆ ಅಲ್ಲ ಎಂದರು.ಮುಂಬರೀ ಸ್ಳೀಯ ಸಂಸ್ಥೆಗಳ ಪ್ರತಿನಿಧಿಗಳ ಎಂ.ಎಲ್.ಸಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲು ಕರೆ ಸಿಎಂ ಕರೆ ನೀಡಿದರು.