ಕೊಪ್ಪಳದಲ್ಲಿ ಜನ ಸ್ವರಾಜ್ ಯಾತ್ರಗೆ ಸಿ.ಎಂ. ಚಾಲನೆ

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕೊಪ್ಪಳದಲ್ಲಿಂದು ಜನ ಸ್ವರಾಜ್ ಸಮಾವೇಶಕ್ಕೆ ಚಾಲನೆನೀಡಿದರು.ನಗಾರಿ ಬಾರಿಸಿ, ಕಹಳೆ ಊದುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಸಿಎಂಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ ಕುಮಾರ ಕಟೀಲ್ ಸಾಥ್ ನೀಡಿದರು. ಕೇಂದ್ರ ಸಚಿವ ಭಗವಂತರಾವ್ ಖೂಬಾ, ಸಚಿವರಾದ ಮುರುಗೇಶ ನಿರಾಣಿ, ಹಾಲಪ್ಪಾಚಾರ್ ಮೈಸೂರು ಸಂಸದ ಪ್ರತಾಪ ಸಿಂಹ,ಕೊಪ್ಪಳ ಸಂಸದ ಸಂಗಣ್ಣ ಕರಡಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ದೊಡ್ಡನಗೌಡ ಇನ್ನಿತರ ಬಿಜೆಪಿ ಮುಖಂಡರುಈ ವೇಳೆ ಉಪಸ್ಥಿತರಿದ್ದರು