ನಾಳೆ ಭಾರತ ಪಾಕ್ ಹೈ ವೋಲ್ಟೇಜ್ ಕದನ
ಆಯ್ ಪಿ ಎಲ್ ಪಂದ್ಯಾವಳಿಗಳನ್ನು ಯಶಸ್ವಿಯಾಗಿ ನಡೆಸಿರುವ ಯು. ಎ. ಇ ನಲ್ಲಿ ಈಗ T20 ವಿಶ್ವಕಪ್ ಕ್ರಿಕೆಟ್ ನ ಹವಾ ಜೋರಾಗಿದೆ. ಪಂದ್ಯಾವಳಿಯ ಅಸಲಿ ಆಟ ಎನ್ನಲಾದ ಸೂಪರ್ ಲೀಗ್ ಪಂದ್ಯಗಳು ಇಂದಿನಿಂದ ಆರಂಭವಾಗಲಿವೆ. ಶನಿವಾರ ಆಸ್ಟ್ರೇಲಿಯಾ- ದ. ಆಫ್ರಿಕ್, ಮತ್ತು ಇಂಗ್ಲೆಂಡ್ -ವೆಸ್ಟ್ ಇಂಡಿಜ್ ನಡುವೆ ಸೆಣಸಾಟ ನಡೆಯಲಿದೆ. ಅದರಲ್ಲೂ ಹೈ ವೋಲ್ಟೇಜ್ ಪಂದ್ಯವಾಗಿರುವ ಭಾರತ ಮತ್ತು ಪಾಕ್ ನಡುವಿನ ಪಂದ್ಯ ಭಾನುವಾರ ಸಾಯಂಕಾಲ 7-30 ಘಂಟೆಗೆ ದುಬೈನಲ್ಲಿ ನಡೆಯಲಿದೆ. 2ವರ್ಷಗಳ ಬಳಿಕ ನಡೆಯಲಿರುವ ಈ ಪಂದ್ಯಕ್ಕೆ ಇಡೀ ದೇಶವೇ ಕಾಯುತ್ತಿದೆ. ಒಟ್ಟಾರೆ ನಾಳೆ ಸೂಪರ್ ಸಂಡೆ ಅಂತೂ ಆಗಲಿದೆ.