ಪೋಕ್ಸೋ’ ಕೇಸ್; ಇಂದು ಮುರುಘಾಶ್ರೀ ಜಾಮೀನು ಅರ್ಜಿ ವಿಚಾರಣೆ

ಚಿತ್ರದುರ್ಗ: 2ನೇ ಪೋಕ್ಸೊ ಪ್ರಕರಣದಡಿ ಬಂಧನಕ್ಕೊಳಗಾಗಿರುವ ಮುರುಘಾ ಶ್ರೀಗಳ ಜಾಮೀನು ಅರ್ಜಿ ವಿಚಾರಣೆಯನ್ನು ಕೋರ್ಟ್ ಇಂದು ನಡೆಸಲಿದೆ. ಇಂದು ಮುರುಘಶ್ರೀಗೆ ಜೈಲೋ..? ಬೇಲೋ ಎಂದು ಕೋರ್ಟ್ ತೀರ್ಪು ಪ್ರಕಟಿಸಲಿದೆ. ಪೋಕ್ಸೊ ಪ್ರಕರಣದಡಿ ಚಿತ್ರದುರ್ಗ 2 ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದು, ಅರ್ಜಿ ವಿಚಾರಣೆಯನ್ನು ನ.23 ಕ್ಕೆ ಮುಂದೂಡಿ ಆದೇಶ ಹೊರಡಿಸಿತ್ತು. ಇಂದು ತೀರ್ಪು ಪ್ರಕಟವಾಗಲಿದೆ. ನ್ಯಾಯಮೂರ್ತಿ ಬಿ.ಕೆ ಕೋಮಲಾ ಆದೇಶ ಹೊರಡಿಸಲಿದ್ದಾರೆ.