ಸಂಸತ್ ಸ್ಫೋಟದ ಬೆದರಿಕೆ ಪ್ರಕರಣ; ಆರೋಪಿಗೆ ಜಾಮೀನು

ನವದೆಹಲಿ: ತಮ್ಮ ಬೇಡಿಕೆಗಳು ಇತ್ಯರ್ಥವಾಗದ ಕಾರಣಕ್ಕೆ ಸಂಸತ್ತನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ ಆರೋಪದ ಮೇಲೆ ಬಂಧಿತರಾಗಿದ್ದ ಮಧ್ಯಪ್ರದೇಶದ ಮಾಜಿ ಶಾಸಕ ಕಿಶೋರ್ ಸಮ್ರಿತೆ ಅವರಿಗೆ ದೆಹಲಿಯ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಸ್ಫೋಟದ ಬೆದರಿಕೆಯಿಂದ ಸಂಸತ್ತಿಗೆ ಯಾವುದೇ ರೀತಿಯ ಹಾನಿಯಾಗಿಲ್ಲ. ಅಲ್ಲದೇ ಈ ಪ್ರಕರಣದ ತನಿಖೆ ಈಗಾಗಲೇ ಪೂರ್ಣಗೊಂಡಿದೆ ಎಂಬುದನ್ನು ಗಮನಿಸಿದ ವಿಶೇಷ ನ್ಯಾ.ವಿಕಾಸ್ ಧುಲ್ ಅವರು ಆರೋಪಿಗೆ ಈ ಜಾಮೀನು ನೀಡಿದ್ದಾರೆ.