ಊರಿನ ಜಾತ್ರೆಗೆ ಬಂದಿದ್ದ ಧಾರವಾಡದ 'ಯೋಧ' ಅಪಘಾತದಲ್ಲಿ ಸಾವು

ಊರಿನ ಜಾತ್ರೆಗೆ ಬಂದಿದ್ದ ಧಾರವಾಡದ 'ಯೋಧ' ಅಪಘಾತದಲ್ಲಿ ಸಾವು

ಧಾರವಾಡ : ರಜೆ ಇದೆ ಎಂದು ಖುಷಿ ಖುಷಿಯಾಗಿಯೇ ಊರಿಗೆ ಬಂದಿದ್ದ ಧಾರವಾಡದ ಯೋಧರೊಬ್ಬರು ಅಪಘಾತದಲ್ಲಿ ಮೃತಪಟ್ಟಿದ್ದು, ಇಡೀ ಊರೇ ಕಂಬನಿ ಮಿಡಿದಿದೆ.'

ಧಾರವಾಡ ಜಿಲ್ಲೆಯ ಹಾರೋಬೆಳವಾಡಿ ಗ್ರಾಮದ ಸೈನಿಕ ನಾಗಪ್ಪ ಉದುಮೇಶಿ (27) ಮೃತಪಟ್ಟ ಸೈನಿಕರಾಗಿದ್ದು, ರಜೆ ವೇಳೆಗೆ ಊರಿನ ಜಾತ್ರೆಯಿದ್ದು, ಬಹಳ ಸಂತೋಷದಲ್ಲಿ ಭಾಗಿಯಾಗಿದ್ದರು.

ಆದರೆ ಆ ಯೋಧನಿಗೆ ಹೆಚ್ಚು ದಿನ ಸಂಭ್ರಮ ಇರಲಿಲ್ಲ. ಗರಗದ ಶ್ರೀ ಮಡಿವಾಳೇಶ್ವರ ಜಾತ್ರೆಗೆ ಸ್ನೇಹಿತರ ಜೊತೆ ತೆರಳುತ್ತಿದ್ದ ವೇಳೆ ಟ್ರಾಕ್ಟರ್ ಗರಗ-ಲೋಕೋರು ಕ್ರಾಸ್ ಬಳಿ ಅಪಘಾತಕ್ಕೀಡಾಗಿದೆ. ಪರಿಣಾನ ಯೋಧ ನಾಗಪ್ಪ ಮೃತಪಟ್ಟಿದ್ದಾರೆ.

ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧನ ಅಂತ್ಯಕ್ರಿಯೆ ನಡೆಸಲಾಗಿದ್ದು, ಯೋಧ ನಾಗಪ್ಪ ನಿಧನಕ್ಕೆ ಇಡೀ ಜಿಲ್ಲೆಯೇ ಕಂಬನಿ ಮಿಡಿದಿದೆ.