ಟೋಕಿಯೊ ಪ್ಯಾರಾ ಒಲಿಂಪಿಕ್ಸ್: ಇತಿಹಾಸ ಬರೆದ ಭಾರತದ ಭಾವಿನಾ ಪಟೇಲ್,ಟೇಬಲ್ ಟೆನಿಸಿನಲ್ಲಿ ಫೈನಲ್ ಪ್ರವೇಶ
ಟೋಕಿಯೊ ಪ್ಯಾರಾ ಒಲಿಂಪಿಕ್ಸ್: ಇತಿಹಾಸ ಬರೆದ ಭಾರತದ ಭಾವಿನಾ ಪಟೇಲ್,ಟೇಬಲ್ ಟೆನಿಸಿನಲ್ಲಿ ಫೈನಲ್ ಪ್ರವೇಶ
ಟೋಕಿಯೊ: ಭಾರತದ ಭಾವಿನಾ ಪಟೇಲ್ ಅವರು ಶನಿವಾರ ಟೋಕಿಯೊದಲ್ಲಿ ನಡೆದ ಮಹಿಳಾ ಸಿಂಗಲ್ಸ್ ಕ್ಲಾಸ್ 4 ಈವೆಂಟ್‌ನಲ್ಲಿ ವಿಶ್ವದ 3 ನೇ ಶ್ರೇಯಾಂಕಿತ ಚೀನಾದ ಜಾಂಗ್ ಮಿಯಾವೊ ವಿರುದ್ಧ ಗೆಲುವು ಸಾಧಿಸುವ ಮೂಲಕ ಪ್ಯಾರಾ ಒಲಿಂಪಿಕ್ಸ್‌ನಲ್ಲಿ ಫೈನಲ್‌ಗೆ ಪ್ರವೇಶಿಸಿದ ಮೊದಲ ಭಾರತೀಯ ಟೇಬಲ್ ಟೆನಿಸ್ ಆಟಗಾರ್ತಿಯಾದರು.
ಭಾವಿನಾ ಪಟೇಲ್ ಜಾಂಗ್ ಮಿಯಾವೊ ಅವರನ್ನು 7-11, 11-7, 11-4, 9-11, 11-8ರಿಂದ ಸೋಲಿಸಿ ಫೈನಲ್‌ಗೆ ಪ್ರವೇಶಿಸಿದರು.
ಭಾವಿನಾ ಭಾನುವಾರ ಚಿನ್ನದ ಪದಕದ ಪಂದ್ಯದಲ್ಲಿ ಚೀನಾದ ಯಿಂಗ್ ಜೌ ಅವರನ್ನು ಎದುರಿಸಲಿದ್ದಾರೆ.
ಇದಕ್ಕೂ ಮುನ್ನ 34 ರ ಹರೆಯದ ಭಾವಿನಾ ವಿಶ್ವದ 5 ನೇ ಶ್ರೇಯಾಂಕಿತ ಆಟಗಾರ್ತಿ ಸೆರ್ಬಿಯಾದ ಬೋರಿಸ್ಲಾವಾ ಪೆರಿಕ್ ರಾಂಕೋವಿಕ್ ಅವರನ್ನು11-5, 11-6, 11-7 ನೇರ ಸೆಟ್‌ಗಳಲ್ಲಿ ಸೋಲಿಸಿದರು.
16 ರ ಸುತ್ತಿನಲ್ಲಿ, ಭಾವಿನಾ ಅವರು ಬ್ರೆಜಿಲ್‌ನ ಜಾಯ್ಸ್ ಡಿ ಒಲಿವೇರಾ ಅವರನ್ನು 12-10 13-11, 11-6 ಅಂಕಗಳಿಂದ ಸೋಲಿಸಿ ಪ್ಯಾರಾಲಿಂಪಿಕ್ಸ್‌ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ ಮೊದಲ ಭಾರತೀಯ ಟೇಬಲ್ ಟೆನಿಸ್ ಆಟಗಾರರಾದರು.