ಮದುವೆ ಡ್ರೆಸ್ನಲ್ಲಿ ಅಜ್ಜಿ ಮಿಂಚಿಂಗ್- 70 ವರ್ಷಗಳ ನಂತರ ಈಡೇರಿತು ಆಸೆ: ಕಣ್ಣೀರಾದ ವೃದ್ಧೆ
ನ್ಯೂಯಾರ್ಕ್: ಈ ಚಿತ್ರದಲ್ಲಿ ಕಾಣಿಸುವ ಅಜ್ಜಿಯ ಹೆಸರು ಮಾರ್ಥಾ ಮಾ ಓಫೇಲಿಯ. ಅಮರಿಕದ ಈ ಅಜ್ಜಿಗೀಗ 90 ವರ್ಷ ವಯಸ್ಸು. ಆದರೆ 70 ವರ್ಷಗಳಿಂದ ಈ ಅಜ್ಜಿಗೆ ಮದುಮಗಳಂತೆ ಬಿಳಿಯ ಗೌನ್ ಧರಿಸಬೇಕು ಎಂಬ ಆಸೆ ಇತ್ತು. 20ನೇ ವಯಸ್ಸಿನಲ್ಲಿ ಉಂಟಾಗಿರುವ ಈ ಆಸೆ ಏಳು ದಶಕಗಳ ಬಳಿಕ ಈಡೇರಿದೆ.
ಅಜ್ಜಿ ಬಿಳಿಯ ಗೌನ್ ಧರಿಸಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು, ಅಪಾರ ಮೆಚ್ಚುಗೆ ಗಳಿಸಿದೆ. ಅಷ್ಟಕ್ಕೂ ಒಂದು ಗೌನ್ಗಾಗಿ 70 ವರ್ಷ ಅಜ್ಜಿ ಕಾಯಬೇಕಿತ್ತಾ ಎಂದು ಕೇಳಬಹುದು.
ಹೌದು. ಈ ಅಜ್ಜಿಯದ್ದು ಕಣ್ಣೀರ ಕಥೆ. ಏಕೆಂದರೆ ಈಕೆ ಕರಿಯಳು. ಎಂದರೆ ಆಫ್ರಿಕನ್ ಮೂಲದವರು ಈ ಅಜ್ಜಿ ಯೌವನಾವಸ್ಥೆಯಲ್ಲಿ ಇರುವಾಗ ಬಿಳಿ ಬಣ್ಣದ ಗೌನ್ ತೊಡಬೇಕೆಂಬ ಆಸೆಯಿತ್ತು. ಆದರೆ ಆ ಸಮಯದಲ್ಲಿ ಆಫ್ರಿಕನ್-ಅಮೆರಿಕನ್ ಸಮುದಾಯದ ಹೋರಾಟ ತೀವ್ರವಾಗಿತ್ತು. ಬಿಳಿ ಜನರು ಕಪ್ಪು ಜನಾಂಗದವರನ್ನು ದೂರವಿಡುತ್ತಿದ್ದರು.
ಆ ಸಮಯದಲ್ಲಿ ಎರಡೂ ಗುಂಪುಗಳು ಅವರಿಗೆ ಬೇರೆ-ಬೇರೆಯದಾದ ಅಂಗಡಿಗಳನ್ನು ಹೊಂದಿತ್ತು. ಆದರೆ, ಬಿಳಿ ಬಣ್ಣದ ಉಡುಪು ತೆಗೆದುಕೊಳ್ಳಲು ಕಪ್ಪು ವರ್ಣೀಯರಿಗೆ ಅಂಗಡಿ ಪ್ರವೇಶವಿರಲಿಲ್ಲ. ಹಾಗಾಗಿ ನೀಲಿ ಬಣ್ಣದ ಉಡುಪನ್ನು ಧರಿಸಿ ಮದುವೆಯಾಗಿದ್ದರು. ಬಿಳಿಯ ಬಣ್ಣ ಮಾತ್ರ ಕನಸಾಗಿಯೇ ಉಳಿದಿತ್ತು. ಆ ಆಸೆಯನ್ನು ಒಳಗೆ ಹುದುಗಿಸಿಕೊಂಡಿದ್ದರು ಅಜ್ಜಿ. ಆದರೆ ಈಗ ಅವರ ಈ ಆಸೆ ಮೊಮ್ಮಗಳಿಗೆ ತಿಳಿದು ಬಿಳಿಯ ಗೌನ್ ತರಿಸಿಕೊಟ್ಟಿದ್ದಾರೆ. ಅಲ್ಲಿ ನೆರೆದಿದ್ದವರ ಕಣ್ಣಂಚು ಒದ್ದೆಯಾಗಿತ್ತು. ವಧುವಿನ ಬಟ್ಟೆಯಲ್ಲಿ ತುಂಬಾ ಚೆನ್ನಾಗಿ ಕಾಣಿಸುತ್ತಿದ್ದೀರಾ ಎಂದು ಹೇಳಿದಾಗ ಅವರ ಕಣ್ಣಲ್ಲಿ ಆನಂದಭಾಷ್ಪ ಸುರಿಯಿತು.
Martha Mae Ophelia Moon Tucker, who was married in 1952, always wanted to wear a wedding dress. But at the time Black women weren’t allowed in bridal shops.
— ABC News (@ABC) July 10, 2021
Now 94, her dream is coming true. https://t.co/hwaA5v9T9B pic.twitter.com/qlJ84ejemX