ದೇವಸ್ಥಾನಕ್ಕೆ ಜಾಗೆ ಅಗಿಯುವ ಸಮಯದಲ್ಲಿ ಮೂರ್ತಿ ಪತ್ತೆ.

ಧಾರವಾಡ.

ಜೈನ ಮುನಿ ದೇವಸ್ಥಾನಕ್ಕೆ ಭೂಮಿ ಪೂಜೆ ಸಲ್ಲಿಸಿ, ಆ ಸ್ಥಳವನ್ನು ಅಗೆಯುವ ಸಮಯದಲ್ಲಿ ಹಳೆಯ ಹಳೆಯ ಪುರಾತನ ವಿಗ್ರಹ ದೊರತ್ತಿದೆ. ಹೌದು ಧಾರವಾಡ ತಾಲೂಕಿನ ಕೊಟಬಾಗಿ ಗ್ರಾಮದ ಬಸದಿ ಜಾಗದಲ್ಲಿ ಜೈನ ಮುನಿಗಳ ಆಶ್ರಯ ತಾಣಕ್ಕೆ ನೆಲ ಅಗೆಯುವಾಗ ಸುಮಾರು 10ಅಡಿ ಆಳದಲ್ಲಿ ಈ ಪುರಾತನ ಮೂರ್ತಿಯು ದೊರೆತಿದೆ. ಇನ್ನು ಇದು ಸುಮಾರು 8ನೇ ಶತಮಾನಕ್ಕಿಂತ ಹಳೇ ವಿಗ್ರಹವಾಗಿದ್ದು ಎಂದು ತಿಳಿದುಬಂದಿದೆ ಅದ್ರಂತೆ ಕೊಟಬಾಗಿ ಗ್ರಾಮಸ್ಥರು ಅಭಿಪ್ರಾಯ ಆಗಿದೆ. ಇದೇ ಜಾಗದಲ್ಲಿ ಕೆಲವು ವರ್ಷಗಳ ಹಿಂದೆ ಭಾಗವಾನ ಆದಿನಾಥರ ಹಾಗೂ ಭಗವಾನ ವಿಮಲನಾಥ ತೀರ್ಥಂಕರರ ಮೂರ್ತಿಗಳು ದೊರೆತಿದ್ದವು.ಹಳೆಗನ್ನಡದಲ್ಲಿರುವ ಶಾಸನಗಳು ದೊರೆತಿದ್ದವು. ಪ.ಪೂ.108 ಮುನಿಶ್ರೀ ಪ್ರಸಂಗಸಾಗರ ಮಹಾರಾಜರು ಕೊಟಬಾಗಿ ಗ್ರಾಮದಲ್ಲಿ ಚಾತುರ್ಮಾಸವನ್ನು ಆಚರಣೆ ಮಾಡುತ್ತಿದ್ದಾರೆ. ಈ ಸಮಯದಲ್ಲಿ ವಿಗ್ರಹ ನೋಡಲು ಜನಸ್ತೋಮ ಹರಿದು ಬರ್ತಿದ್ದಾರೆ.