ಕೆರೆ ಕಟ್ಟಿ ಒಡೆದು ಸ್ವಲ್ಪದರಲ್ಲೇ ಅವಾಂತರ ತಪ್ಪಿದೆ, ಈ ಕೆರೆಗೆ ಬೇಟೆ ನೀಡಿದ ಸಚಿವ ಮುನೇನಕೊಪ್ಪ

ನಿನ್ನೆ ಹಾಗೂ ಮೊನ್ನೆ ಸುರಿದ ಧಾರಾಕಾರ ಮಳೆಗೆ ಧಾರವಾಡ ತಾಲೂಕಿನ ಹೊಲ್ತಿಕೋಟೆ ಗ್ರಾಮದ ದೊಡ್ಡ ಕರೆ ತುಂಬಿ ಕೋಡಿ ಬಿದ್ದಿದ್ದು,ರೈತರ ಬೆಳೆಗಳಿಗೆ ನಷ್ಟವುಂಟಾಗಿದೆ. ಕೆರೆ ಕಟ್ಟೆ ಒಡೆದಿದ್ದು, ಆ ಭಾಗದ ಜೀವನಾಡಿಯಾಗಿರುವ ಈ ಕೆರೆಯ ನೀರು ಖಾಲಿಯಾಗುತ್ತಿದ್ದು, ಈ ಕೆರೆಗೆ ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ಅಧಿಕಾರಿಗಳ ಜೊತೆ ಪರಿಶೀಲನೆ ನಡೆಸಿದರು. ಅನಂತರ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ಮುಂಬರುವ ಎರಡ್ಮೂರು ದಿನಗಳಲ್ಲಿ ಈ ಭಾಗದಲ್ಲಿ ಮಳೆ ಮುಂದುವರೆಯುವ ಸಾಧ್ಯತೆ ಇರುವುದರಿಂದ ರೈತರು ಜೀವ ರಕ್ಷಣೆಗೆ ಎಚ್ಚರಿಕೆ ವಹಿಸಬೇಕು. ಸುಮಾರು 110 ಮಿಲಿ ಮೀಟರ್ ಪ್ರಮಾಣದ ಮಳೆಯಾದ ಪರಿಣಾಮವಾಗಿ, ಹೊಲ್ತಿಕೋಟಿ ಕೆರೆಗೆ ಒಳಹರಿವು ಹೆಚ್ಚಾದ ಪರಿಣಾಮ, ಕೆರೆಯ ತಡೆಗೋಡೆ ಒಡೆದಿದೆ. ನೀತಿ ಸಂಹಿತೆ ಜಾರಿಯಲ್ಲಿದ್ದರೂ ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಸಮೀಕ್ಷೆ ಮಾಡಲು ಸೂಚಿಸಲಾಗಿದೆ. ಬೆಳೆ ಹಾಗೂ ಮನೆಗಳ ಹಾನಿಗೊಳಗಾದವರಿಗೆ ಸಮೀಕ್ಷೆ ವರದಿ ಆಧರಿಸಿ ಪರಿಹಾರ ಒದಗಿಸಲಾಗುವುದು ಎಂದರು....