ಅಯ್ಯೋ ಇದು ಬಾಹುಬಲಿ ನಟ ಪ್ರಭಾಸ್ ಅವರೇನಾ? ಫೋಟೋ ನೋಡಿ ಜನ ಶಾಕ್
ಆಗಾಗ ವೈರಲ್ ಆಗುತ್ತೆ ಪ್ರಭಾಸ್ ಫೋಟೋ
ಶೂಟಿಂಗ್ ಸೆಟ್ನಿಂದಲೂ ಅಥವಾ ಇನ್ಯಾವುದೋ ಇವೆಂಟ್ನಿಂದ ಪ್ರಭಾಸ್ ಲುಕ್ ಆಗಾಗ ವೈರಲ್ ಆಗುತ್ತಲೇ ಇರುತ್ತದೆ. ಈ ಫೋಟೋಗಳಲ್ಲಿ ಪ್ರಭಾಸ್ ಅವರನ್ನು ಕಂಡಾಗ ಅಯ್ಯೋ ಬಾಹುಬಲಿ ನಟನಿಗೆ ಇಷ್ಟು ಏಜ್ ಆಯ್ತಾ ಎನಿಸುವಂತಿರುತ್ತದೆ. ಈಗ ನಟನ ಇನ್ನೊಂದು ಫೋಟೋ ವೈರಲ್ ಆಗಿದೆ.
ಶಿವಣ್ಣ-ರಜನಿ ಜೊತೆ ಪ್ರಭಾಸ್
ವೈರಲ್ ಆಗಿರುವ ಫೋಟೋದಲ್ಲಿ ಶಿವರಾಜ್ಕುಮಾರ್ ಹಾಗೂ ರಜನೀಕಾಂತ್ ಅವರೂ ಕೂಡಾ ಇದ್ದಾರೆ. ಮಧ್ಯದಲ್ಲಿ ಪ್ರಭಾಸ್ ನಿಂತಿರುವುದನ್ನು ಕಾಣಬಹುದು. ಇವರೇನು ಜೊತೆಯಾಗಿ ಸಿನಿಮಾ ಮಾಡುತ್ತಾರಾ ಎಂದು ಸಂದೇಹ ಪಟ್ಟಿದ್ದಾರೆ ನೆಟ್ಟಿಗರು.