ಪ್ರತಿ ಮಸೀದಿಯಲ್ಲೂ ಶಿವಲಿಂಗ ಹುಡುಕಿ ವಿವಾದ ಎಬ್ಬಿಸಬೇಡಿ - ಆರ್. ಎಸ್. ಎಸ್. ಮುಖ್ಯಸ್ಥ ಮೋಹನ್ ಭಾಗವತ್

ಪ್ರತಿ ಮಸೀದಿಯಲ್ಲೂ ಶಿವಲಿಂಗ ಹುಡುಕಿ ವಿವಾದ ಎಬ್ಬಿಸಬೇಡಿ - ಆರ್. ಎಸ್. ಎಸ್. ಮುಖ್ಯಸ್ಥ ಮೋಹನ್ ಭಾಗವತ್

ಜ್ಯಾನವಾಪಿ ವಿವಾದವು ನಂಬಿಕೆಯ ಕೆಲವು ವಿಷಯಗಳನ್ನು ಒಳಗೊಂಡಿದ್ದು ನ್ಯಾಯಾಲಯದ ತೀರ್ಪುನ್ನು ಎಲ್ಲರೂ ಒಪ್ಪಿಕೊಳ್ಳಬೇಕು ಆದರೆ ಪ್ರತಿ ಮಸೀದಿಯಲ್ಲಿ ಶಿವಲಿಂಗವನ್ನು ಹುಡುಕಿ ಹೊಸ ವಿವಾದ ಸೃಷ್ಟಿಸುವ ಅಗತ್ಯವಿಲ್ಲ ಎಂದು ಆರ್. ಎಸ್. ಎಸ್. ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ಸಂಘದ 3 ನೆ ರಾಷ್ಟ್ರೀಯ ತೃತೀಯ ವರ್ಷದ ಅಧಿಕಾರಿ ಶಿಬಿರ ಉದ್ದೇಶಿಸಿ ಮಾತನಾಡಿದ ಅವರು ಅಯೋಧ್ಯೆ ಆಂದೋಲನದಲ್ಲಿ ಭಾಗವಹಿಸಿದ್ದು ಒಂದು ಅಪವಾದವಾಗಿದೆ ಎಂದು ಆರ್. ಎಸ್. ಎಸ್. ಈಗಾಗಲೇ ಸ್ಪಷ್ಟಪಡಿಸಿದೆ. ಇನ್ನು ಮುಂದೆ ಇಂತಹ ಚಳುವಳಿಗಳನ್ನು ಸಂಘ ಹಮ್ಮಿಕೊಳ್ಳುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಈಗ ಜ್ಯಾನವಾಪಿ ಮಸೀದಿಯ ವಿಷಯ ನಡೆಯುತ್ತಿದೆ. ಇತಿಹಾಸವನ್ನು ಯಾವತ್ತು ಬದಲಾಯಿಸಲು ಸಾಧ್ಯವಿಲ್ಲ. ಆ ಇತಿಹಾಸವನ್ನು ಇಂದಿನ ಹಿಂದೂಗಳಾಗಲಿ ಅಥವಾ ಮುಸ್ಲಿಂ ರಾಗಲಿ ಮಾಡಿಲ್ಲ. ಇಸ್ಲಾಂ ಧರ್ಮವು ಭಾರತಕ್ಕೆ ಬಂದ ಸಂದರ್ಭದಲ್ಲಿ ಆಕ್ರಮಣಕಾರರ ದಾಳಿಗೆ ನಡೆದ ಕೃತ್ಯಗಳು ಆಗಿವೆ ಎಂದರು. ಮುಸ್ಲಿಂ ರಾಜರುಗಳು ದಂಡೆತ್ತಿ ಭಾರಕ್ಕೆ ಬಂದಾಗ ಇಸ್ಲಾಂ ಧರ್ಮ ಸ್ಥಾಪಿಸಲು ಹಾಗೂ ಜನರ ಮನಸ್ಸನ್ನು ದುರ್ಬಲಗೊಳಿಸಲು ಇಂತಹ ಸಾವಿರಾರು ದೇವಾಲಯಗಳನ್ನು ನಾಶಮಾಡಿದ್ದಾರೆ. ಆದರೆ ಸಂಘವು ಈ ವಿಷಯದ ಬಗ್ಗೆ ಏನನ್ನೂ ಹೇಳಲು ಇಚ್ಛೆಸುವುದಿಲ್ಲ ಎಂದರು. ಈ ಹಿಂದೆ ನವೆಂಬರ 9 ರಂದು ರಾಮಜನ್ಮ ಭೂಮಿ ಚಳುವಳಿ ಇದೇ ಎಂದು ಹೇಳಿದ್ದೆವು ಆದರೆ ಅದು ನಮ್ಮ ಸಂಘದ ಸ್ವಭಾವಕ್ಕೆ ವಿರುದ್ಧವಾಗಿದ್ದರೂ ಅದರಲ್ಲಿ ಸೇರಿಕೊಂಡೆವು. ಕೆಲವು ಐತಿಹಾಸಿಕ ಕಾರಣಗಳಿಗಾಗಿ ಅಂದಿನ ಪರಿಸ್ಥಿತಿಯಿಂದಾಗಿ ಆ ಕೆಲಸವನ್ನು ಪೂರ್ಣಗೊಳಿಸಿದ್ದೇವೆ. ಆದರೆ ಇನ್ನು ಮುಂದೆ ಇಂತಹ ಯಾವುದೇ ಆಂದೋಲನ ಅಥವಾ ಚಳುವಳಿಯಲ್ಲಿ ಸಂಘ ಭಾಗವಹಿಸುವುದಿಲ್ಲ ಎಂದು ತಿಳಿಸಿದರು. 

ಜ್ಯಾನವಾಪಿ ಮಸೀದಿ ಹಾಗೂ ಕಾಶಿ ವಿಶ್ವನಾಥ ದೇವಾಲಯದ ವಿವಾದದಲ್ಲಿರುವ ಎಲ್ಲರೂ ಒಟ್ಟಿಗೆ ಕುಳಿತು ಪರಸ್ಪರ ಒಪ್ಪಿಗೆಯೊಂದಿಗೆ ದಾರಿ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು. ಆದರೆ ಪ್ರತಿ ಭಾರಿ ಸಂಧಾನ ನಡೆಯುವುದಿಲ್ಲ ಹಾಗಾಗಿ ಜನರು ನ್ಯಾಯಾಲಯದ ಬಾಗಿಲು ತಟ್ಟುತ್ತಾರೆ. ನ್ಯಾಯಾಂಗ ವ್ಯವಸ್ಥೆಯನ್ನು ಪವಿತ್ರ ಮತ್ತು ಸರ್ವೋಚ್ಚ ಎಂದು ಭಾವಿಸಿ ನ್ಯಾಯಾಲಯದ ತೀರ್ಪಿಗೆ ಎಲ್ಲರೂ ತಲೆ ಬಾಗಬೇಕಾಗಿದೆ ಎಂದು ಭಾಗವತ್ ತಿಳಿಸಿದರು.

ಜ್ಯಾನವಾಪಿಗೆ ಸಂಬಂಧಿಸಿದಂತೆ ನಮಗೆ ಕೆಲವು ಸಾಂಕೇತಿಕ ನಂಬಿಕೆ ಹಾಗೂ ಸಂಪ್ರದಾಯಗಳು ಇವೆ ಆದರೆ ಪ್ರತಿ ಮಸೀದಿಯಲ್ಲೂ ಶಿವಲಿಂಗ ಹುಡುಕುವುದು ತಪ್ಪು ಎಂದು ಭಾಗವತ್ ತಿಳಿಸಿದರು.

ಮುಸ್ಲಿಂ ರ ಆರಾಧನಾ ಪದ್ಧತಿ ಹೊರಗಿನಿಂದಲೂ ಬಂದಿದ್ದರೂ ಕೂಡ ಅವರು ಹೊರಗಿನವರಲ್ಲ. ನಮ್ಮ ಸಂಪ್ರದಾಯವು ಒಂದೇ ಅಗಿರುತ್ತದೆ. ಕೆಲವು ರಾಷ್ಟೀಯವಾದಿ ಮುಸ್ಲಿಮರು ಅನೇಕ ಸ್ವಾತಂತ್ರ್ಯ ಹೋರಾಟದಲ್ಲಿ ಹಿಂದುಗಳೊಂದಿಗೆ ಹೋರಾಡಿದ್ದಾರೆ.ಅವರು ನಮ್ಮದೇಶದ ಮುಸ್ಲಿಮರಿಗೆ ಆದರ್ಶಪ್ರಾಯರಾಗಿದ್ದಾರೆ ಎಂದು ಮೋಹನ್ ಭಾಗವತ್ ಹೇಳಿದ್ದಾರೆ.

ಬ್ಯುರೊ ರಿಪೋರ್ಟ್ 9 ಲೈವ್ ನ್ಯೂಸ್

.