ಮಲೇಶಿಯಾದಲ್ಲಿ ಧಾರವಾಡ ಕುವರನಿಗೆ ಕಂಚಿನ ಪದಕ

ಸಾಧನೆಗೆ ವಯಸ್ಸಿನ ಹಂಗಿಲ್ಲ ಹಾಗೆ ಈ ಪುಟ್ಟ ಪೊರ ತೋರಿದ ಸಾಧನೆ ಅಂತಹುದು ಹೌದು ಧಾರವಾಡ ಮಾಳಾಪುರದ ನಿವಾಸಿ ಶ್ರೇಯಸ್ ಈರಣ್ಣ ಅಕ್ಕಿಮರಡಿ ಈ ಕುವರ ಮಲೇಶಿಯಾದದಲ್ಲಿ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ಕಂಚಿನ ಪದಕ ಗೆದ್ದು ಬಂದು ಭಾರತಕ್ಕೆ ಹೆಮ್ಮೆ ತಂದಿದ್ದಾನೆ.
ಹೌದು ಧಾರವಾಡ ಮಲ್ಲಸಜ್ಜನ ಶಾಲೆಯ ಈ ಪುಟ್ಟ ಪೊರ ಕರಾಟೆಯಲ್ಲಿ ಸ್ಪರ್ಧಿಸಲು ಮಲೇಶಿಯಾಕ್ಕೆ ತೆರಳಿ ಈಗ ಕಂಚು ಗೆದ್ದು ಬಂದಿದ್ದು ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಪೊರನ ಸಾಧನೆಗೆ ಶಹಬ್ಬಾಸ್ ಗಿರಿ ಕೊಟ್ಟಿದ್ದಾರೆ.
18 ನೇ ಅಂತಾರಾಷ್ಟ್ರೀಯ ಓಕಿನವಾ ಗೊಜು ರೂಂ ಇಪ್ಪೊ ಸಿಟಿ ಕರಾಟೆ ಓಪನ್ ಚಾಂಪಿಯನ್ ಶಿಪ್ 2022 ನಲ್ಲಿ ಭಾಗವಹಿಸಿ ಮೂರನೇ ಸ್ಥಾನ ಪಡೆದು ಕಂಚಿನ ಪದಕ ಗೆದ್ದು ಭಾರತದ ಭಾವುಟ ಹಾರಿಸಿದ್ದಾನೆ.