ಕೋಡಿ ಬಿದ್ದ ಹೊಲ್ತಿಕೋಟೆ ದೊಡ್ಡ ಕೆರೆ

ಧಾರವಾಡ ಜಿಲ್ಲೆಯಾದ್ಯಂತ ಕಳೆದ ಎರಡು ಮೂರ ದಿನಗಳಿಂದ ಸುರಿಯುತ್ತಿರುವ ಅಕಾಲಿಕ ಮಳೆಗೆ ಧಾರವಾಡ ತಾಲೂಕಿನ ಹೊಲ್ತಿಕೋಟೆ ಗ್ರಾಮದ ದೊಡ್ಡ ಕೆರೆ ಕೋಡಿ ಬಿದ್ದಿದೆ. ಸುಮಾರು 40 ಎಕರೆ ಪ್ರದೇಶದಲ್ಲಿರುವ ಈ ಕೆರೆಯ ಒಂಡೆ ಕೊಚ್ಚಿಕೊಂಡು ಹೋಗಿದ್ದು, ಕೆರೆಯ ನೀರು ಹರಿದು ಹೋಗುತ್ತಿದೆ. ಅಲ್ಲದೇ ಹೊಲ ಗದ್ದೆಗಳಿಗೆ ನೀರು ನುಗ್ಗಿ ಬೆಳೆಗಳು ಸಂಪೂರ್ಣ ನಾಶವಾಗುವಂತೆ ಮಾಡಿದೆ. ಈ ಕೆರೆ ಹೊಲ್ತಿಕೋಟಿ ಗ್ರಾಮದ ಜನರ ನಾಡ ಮಿಡಿತವಾಗಿದ್ದು, ಕೆಲವು ರೈತರು ಕೆರೆ ನೀರಿಗೆ ಅವಲಂಬಿತರಾಗಿದ್ದರು. ಸುತ್ತಮುತ್ತ ಗುಡ್ಡ ಪ್ರದೇಶ ಒಳಗೊಂಡು ಪ್ರಾಣಿ ಪಕ್ಷಿಗಳ ನೀರು ಸೇವನೆಗೆ ಇದೇ ಕೆರೆಗೆ ಬರುತ್ತಿದ್ದವು. ಅಕಾಲಿಕ ಮಳೆ ಹೆಚ್ಚಾಗಿ ಕೋಡಿ ಒಡೆದು ಹೋಗಿದೆ. ಆದಷ್ಟು ಬೇಗಾ ಜನ ಪ್ರತಿನಿಧಿಗಳು, ಅಧಿಕಾರಿಗಳು ಕೆರೆ ಕೋಡೆ ಸರಿಪಡೆಸಿ, ಗ್ರಾಮಸ್ಥರ ನೆರೆವಿಗೆ ನಿಲ್ಲಬೇಕು ಎಂದು ಹೊಲ್ತಿಕೋಟೆ ಗ್ರಾಮದ ನಾಗರಾಜ ಬಡಿಗೇರ ಮನವಿ ಮಾಡಿಕೊಂಡರು.