ಬ್ಯಾಂಕಿನಲ್ಲಿ ಹಣ ಎಫ್.ಡಿ ಇಟ್ಟಿದ್ರೆ ಎಚ್ಚರ: ಗ್ರಾಹಕರ ಹಣದಿಂದ ಕೋಟಿ ಕೋಟಿ ಲಾಭ ಮಾಡಿಕೊಂಡಿದ್ದ ಮ್ಯಾನೇಜರ್ ಜೈಲುಪಾಲು

ಬ್ಯಾಂಕಿನಲ್ಲಿ ಹಣ ಎಫ್.ಡಿ ಇಟ್ಟಿದ್ರೆ ಎಚ್ಚರ: ಗ್ರಾಹಕರ ಹಣದಿಂದ ಕೋಟಿ ಕೋಟಿ ಲಾಭ ಮಾಡಿಕೊಂಡಿದ್ದ ಮ್ಯಾನೇಜರ್ ಜೈಲುಪಾಲು

ಬೆಂಗಳೂರು: ಬ್ಯಾಂಕಿನಲ್ಲಿ ನಿಮ್ಮ ಹಣವನ್ನ ಎಫ್.ಡಿ ಇಟ್ಟಿದ್ರೆ ಒಂದು ಸಾರಿ ಅದರ ಬಗ್ಗೆ ಮಾಹಿತಿ ಪಡೆದುಕೊಳ್ಳಿ.. ಗ್ರಾಹಕರ ಎಫ್.ಡಿ ಹಣದಿಂದ ಕೋಟಿ ಕೋಟಿ ಲಾಭ ಮಾಡಿಕೊಂಡಿದ್ದ ಮಹಿಳಾ ಮ್ಯಾನೇಜರ್ ಈಗ ಜೈಲುಪಾಲಾಗಿದ್ದಾರೆ. ತಮಿಳುನಾಡಿನ ಕನ್ಯಾಕುಮಾರಿ ಮೂಲದ ಸಜಿಲ ಬಂಧಿತ ಆರೋಪಿಯಾಗಿದ್ದಾರೆ.

ಎಸ್.ಆರ್.ನಗರದ ಬ್ಯಾಂಕೊಂದರಲ್ಲಿ ರಿಲೇಶನ್ಶಿಪ್ ಮ್ಯಾನೇಜರ್ ಆಗಿದ್ದ ಸಜಿಲ ದೊಡ್ಡ ಪ್ರಮಾಣದ ಎಫ್.ಡಿ ಇಟ್ಟವರ ಹಣ ತೆಗೆದು ಎಲ್‌ಐಸಿ ಬಾಂಡ್ ಖರೀದಿಸುತ್ತಿದ್ದಳು. ಬಾಂಡ್ ಮೆಚ್ಯೂರ್ ಬಳಿಕ ಗ್ರಾಹಕರ ಹಣ ಅವರ ಖಾತೆಗೆ ಡೆಪಾಸಿಟ್ ಮಾಡುತ್ತಿದ್ದಳು. ಗ್ರಾಹಕರ ಹಣದಿಂದಲೇ ಲಾಭ ಮಾಡಿದ್ರು ಲಾಭ ಮಾತ್ರ ಅವಳು ಪಡಿತಾ ಇದ್ಲು.. ಬ್ಯಾಂಕಿನ ಆಂತರಿಕ ಲೆಕ್ಕ ಪರಿಶೋಧನೆ ಸಂದರ್ಭದಲ್ಲಿ ಸಜಿಲಳ ಕಳ್ಳಾಟ ಪತ್ತೆಯಾಗಿದೆ. 4.92 ಕೋಟಿ ಅಕ್ರಮವಾಗಿ ವ್ಯವಹಾರ ನಡೆಸಿರುವುದು ಪತ್ತೆಯಾಗಿದೆ.

ವಿಚಾರ ತಿಳಿದ ಬ್ಯಾಂಕಿನ ಡೆಪ್ಯೂಟಿ ಜನರಲ್ ಮ್ಯಾನೇಜರ್ ಎಸ್.ಆರ್.ನಗರ ಠಾಣೆಗೆ ದೂರು ನೀಡಿದ್ದಾರೆ. ಗ್ರಾಹಕರ ನಂಬಿಕೆಗೆ ದ್ರೋಹ ಬಗೆಯುತ್ತಿದ್ದ ಖಾಸಗಿ ಬ್ಯಾಂಕಿನ ರಿಲೇಶನ್ಶಿಪ್ ಮ್ಯಾನೇಜರ್ ಸಜಿಲಳನ್ನ ಬಂಧಿಸಿದ ಪೊಲೀಸರು ಸರಿಸುಮಾರು 250 ಎಲ್‌ಐಸಿ ಬಾಂಡ್ ಗಳ ಪರಿಶೀಲನೆ ಮಾಡಿದ್ದಾರೆ. ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.