ವಿವಾದಾತ್ಮಕ ಘೋಷಣೆ ಆರೋಪ ಅಜ್ಮೀರ್ ಷರೀಫ್ ದರ್ಗಾದಲ್ಲಿ ಘರ್ಷಣೆ

ಅಜ್ಮೀರ್ ದರ್ಗಾದಲ್ಲಿ ಉರುಸ್ ಸಮಯದಲ್ಲಿ ಹೊಡೆದಾಟ ನಡೆದಿದೆ. ಮಾಹಿತಿ ಪ್ರಕಾರ, ವಿವಾದಾತ್ಮಕ ಘೋಷಣೆ ಕೂಗಿರುವ ಹಿನ್ನೆಲೆಯಲ್ಲಿ ಘರ್ಷಣೆ ಸಂಭವಿಸಿದೆ ಎನ್ನಲಾಗಿದೆ. ಖಾದೀಮ್ ಮತ್ತು ಜರೀನ್ ಗುಂಪುಗಳ ಮಧ್ಯೆ ಪರಸ್ಪರ ಘರ್ಷಣೆ ನಡೆದಿದೆ ಎನ್ನಲಾಗಿದೆ.
ವೈರಲ್ ಆಗಿದೆ. ವೀಡಿಯೊದಲ್ಲಿ, ದೊಡ್ಡ ಸಂಖ್ಯೆಯ ಜನರು ಪರಸ್ಪರ ಹೊಡೆದಾಡಿಕೊಳ್ಳುತ್ತಿರುವುದು ಕಂಡು ಬಂದಿದೆ.
ಪ್ರತಿ ವರ್ಷ ಪ್ರಸಿದ್ಧ ಸೂಫಿ ಸಂತರಲ್ಲಿ ಒಬ್ಬರಾದ ಚಿಶ್ತಿಯ ಪುಣ್ಯತಿಥಿಯಂದು ಉರುಸ್ ಆಯೋಜಿಸಲಾಗುತ್ತದೆ. ಚಿಶ್ತಿಯನ್ನು 'ಗರೀಬ್ ನವಾಜ್' ಎಂದೂ ಕರೆಯುತ್ತಾರೆ. ಉರುಸ್ ಸಮಯದಲ್ಲಿ, ಹೆಚ್ಚಿನ ಸಂಖ್ಯೆಯ ಜನರು ಅಜ್ಮೀರ್ ಶರೀಫ್ ದರ್ಗಾಕ್ಕೆಆಗಮಿಸುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಕೂಡಾ ಪ್ರತಿ ವರ್ಷವೂ ಉರುಸ್ ಸಮಯದಲ್ಲಿ ಈ ದರ್ಗಾಕ್ಕೆ ಚಾದರ್ ಕಳುಹಿಸುತ್ತಾರೆ. ಈ ವರ್ಷವೂ ಇಲ್ಲಿ ಮೋದಿ ಅವರು ಕಳುಹಿಸಿರುವ ಚಾದರ್ ಅರ್ಪಿಸಲಾಗಿದೆ.