ಹಿಮಾಚಲದಲ್ಲಿ ಹಾವು, ಏಣಿ ಆಟ – ಪಕ್ಷೇತರರೇ ನಿರ್ಣಾಯಕ?
ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಹಾವು, ಏಣಿ ಆಟ ಆರಂಭವಾಗಿದ್ದು ಪಕ್ಷೇತರರು ನಿರ್ಣಾಯಕ ಸ್ಥಾನ ವಹಿಸುವ ಸಾಧ್ಯತೆಯಿದೆ.
ಮತ ಎಣಿಕೆಯ(Himachal Pradesh Election Result) ಆರಂಭದಿಂದ ಬೆಳಗ್ಗೆ 10:45ರವರೆಗೂ ಯಾವುದೇ ಪಕ್ಷಕ್ಕೆ ಸ್ಪಷ್ಟವಾದ ಮುನ್ನಡೆ ಸಿಕ್ಕಿಲ್ಲ. ಒಂದು ಬಾರಿ ಬಿಜೆಪಿ(BJP) ಮತ್ತೊಮ್ಮೆ ಕಾಂಗ್ರೆಸ್(Congress) ಮುನ್ನಡೆ ಸಾಧಿಸುತ್ತಿದೆ.
ಸದ್ಯ ಬಿಜೆಪಿ 32, ಕಾಂಗ್ರೆಸ್ 33 ಇತರರು 3 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದಾರೆ. ಹಿಮಾಚಲದಲ್ಲಿ ಒಟ್ಟು 68 ಕ್ಷೇತ್ರಗಳಿದ್ದು ಬಹುಮತಕ್ಕೆ 35 ಸ್ಥಾನಗಳ ಅಗತ್ಯವಿದೆ.
ಆಪರೇಷನ್ ಕಮಲದ ಭೀತಿ ಹಿನ್ನೆಲೆಯಲ್ಲಿ ಕಾಂಗ್ರೆಸ್ ತನ್ನ ಎಲ್ಲಾ ಶಾಸಕರನ್ನು ಈಗಲೇ ಶಿಮ್ಲಾ ಕರೆಸಿಕೊಂಡಿದ್ದಾರೆ. 2017ರ ಚುನಾವಣೆಯಲ್ಲಿ ಬಿಜೆಪಿ 44, ಕಾಂಗ್ರೆಸ್ 21 ಸ್ಥಾನಗಳನ್ನು ಗೆದ್ದುಕೊಂಡಿತ್ತು.
ಪ್ರತಿ ಬಾರಿ ಹಿಮಾಚಲದಲ್ಲಿ ಸರ್ಕಾರ ಬದಲಾಗುತ್ತಿದೆ. ಆದರೆ ಈ ಬಾರಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಏರಿದರೆ 1990ರ ನಂತರ ಸತತ ಎರಡನೇ ಬಾರಿ ಅಧಿಕಾರಕ್ಕೆ ಏರಿದ ಪಕ್ಷ ಎಂದು ಇತಿಹಾಸ ಬರೆಯಲಿದೆ.