150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ – ಗುಜರಾತ್ನಲ್ಲಿ ದಾಖಲೆ ಬರೆಯುತ್ತಾ ಬಿಜೆಪಿ?
ಗಾಂಧಿನಗರ: ಗುಜರಾತ್ ಮತ ಎಣಿಕೆ(Gujarat Election Result) ನಡೆಯುತ್ತಿದ್ದು ಬಿಜೆಪಿ(BJP) ಸತತ 7ನೇ ಬಾರಿ ಅಧಿಕಾರಕ್ಕೆ ಏರಲಿದೆ.
ಚುನಾವಣೋತ್ತರ ಸಮೀಕ್ಷೆ ಭವಿಷ್ಯದಂತೆ ಬೆಳಗ್ಗೆ 10:30 ಗಂಟೆಯ ಟ್ರೆಂಡ್ ಪ್ರಕಾರ 150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ 18, ಆಪ್ 06, ಇತರರು 02 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ.
ಈ ಬಾರಿ 127ಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಬಿಜೆಪಿ ಗೆದ್ದರೆ ಅದು ಬಿಜೆಪಿ ಪಕ್ಷದ ಮಟ್ಟಿಗೆ ದಾಖಲೆಯಾಗಲಿದೆ. 1985ರಲ್ಲಿ ಕಾಂಗ್ರೆಸ್ 149 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಇದು ಗುಜರಾತ್ನಲ್ಲಿ ಪಕ್ಷವೊಂದರ ಅತ್ಯಧಿಕ ಸಾಧನೆ. ಈ ದಾಖಲೆಯನ್ನು ಬಿಜೆಪಿ ಬ್ರೇಕ್ ಮಾಡುತ್ತಾ ಎನ್ನುವುದೇ ಸದ್ಯದ ಕುತೂಹಲ.
2002ರ ಚುನಾವಣೆಯಲ್ಲಿ ಬಿಜೆಪಿ 127 ಸ್ಥಾನ ಸ್ಥಾನ ಗೆದ್ದುಕೊಂಡಿತ್ತು. 2017ರಲ್ಲಿ 99, 2012ರಲ್ಲಿ 115, 2007ರಲ್ಲಿ 117 ಸ್ಥಾನಗಳನ್ನು ಬಿಜೆಪಿ ಜಯಗಳಿಸಿತ್ತು.