ರಾಜ್ಯದಲ್ಲಿ ʻಗೋಹತ್ಯೆ ನಿಷೇಧʼ ಕಾನೂನು ಜಾರಿಯಿಂದ 6,000 ಜಾನುವಾರುಗಳ ರಕ್ಷಣೆ: ಡೇಟಾ ವರದಿ

ಬೆಂಗಳೂರು: ರಾಜ್ಯದಲ್ಲಿ ʻಗೋಹತ್ಯೆ ನಿಷೇಧʼ ಕಾನೂನು ಜಾರಿಗೆ ಬಂದ ನಂತರ 2021 ರ ಜನವರಿಯಿಂದ 6,721 ಗೋವುಗಳನ್ನು ಕಸಾಯಿಖಾನೆಗಳಿಗೆ ಕಳುಹಿಸುವುದನ್ನು ತಡೆಯಲಾಗಿದೆ ಎಂದು ಸರ್ಕಾರದ ಅಂಕಿಅಂಶಗಳು ತಿಳಿಸಿವೆ.
ಆದ್ರೆ, ಪ್ರಸ್ತುತ ಕೇವಲ ಆರು ಸರ್ಕಾರಿ ಗೋಶಾಲೆಗಳು ಚಾಲನೆಯಲ್ಲಿದ್ದು, ಬಿಡಾಡಿ ದನಗಳ ಪುನರ್ವಸತಿ ಕಾರ್ಯವನ್ನು ನಡೆಸುತ್ತಿರುವ 219 ಖಾಸಗಿ ಆಶ್ರಯದಲ್ಲಿ ಗೋವುಗಳನ್ನು ಆರೈಕೆ ಮಾಡಲಾಗುತ್ತಿದೆ.
ಪಶುಸಂಗೋಪನಾ ಇಲಾಖೆಯ ಅಂಕಿಅಂಶಗಳ ಪ್ರಕಾರ, ಹೊಸ ಕಾನೂನಿನ ಪ್ರಕಾರ, ಮೈಸೂರು ಅತಿ ಹೆಚ್ಚು= ಜಾನುವಾರುಗಳನ್ನು ವಧೆಯಿಂದ ರಕ್ಷಿಸಿದ್ದು, ತುಮಕೂ ಬೆಳಗಾವಿ ಮತ್ತು ಬೆಂಗಳೂರು ನಗರಜಿಲ್ಲೆಗಳು ನಂತರದ ಸ್ಥಾನದಲ್ಲಿವೆ.
ಕರ್ನಾಟಕ ಗೋಹತ್ಯೆ ತಡೆ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ ರಾಜ್ಯದಲ್ಲಿ ಜಾನುವಾರುಗಳ ಹತ್ಯೆಗೆ ಸಂಪೂರ್ಣ ನಿಷೇಧ ಹೇರಿದೆ. 13 ವರ್ಷ ಮೇಲ್ಪಟ್ಟ ಮಾರಣಾಂತಿಕ ಅನಾರೋಗ್ಯದ ದನ ಮತ್ತು ಎಮ್ಮೆಗಳ ಹತ್ಯೆಯನ್ನು ಮಾತ್ರ ಅನುಮತಿಸಲಾಗಿದೆ. ಅಲ್ಲದೆ, ಸರ್ಕಾರವು ಪುಣ್ಯಕೋಟಿ ಯೋಜನೆಯನ್ನು ಪ್ರಾರಂಭಿಸಿದ್ದು, ಇದರ ಅಡಿಯಲ್ಲಿ ಇದುವರೆಗೆ 167 ಹಸುಗಳನ್ನು ದತ್ತು ತೆಗೆದುಕೊಳ್ಳಲಾಗಿದೆ.
ಚಿಕ್ಕಮಗಳೂರು, ವಿಜಯಪುರ, ಹಾಸನ, ಮೈಸೂರು, ತುಮಕೂರು ಮತ್ತು ಕೋಲಾರ - ಆರು ಸರ್ಕಾರಿ ಗೋಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಉಳಿದ ಶೆಲ್ಟರ್‌ಗಳಿಗೆ ಅಧಿಕಾರಿಗಳು ಜಮೀನು ಗುರುತಿಸುತ್ತಿದ್ದಾರೆ.