ಉತ್ತರಾಖಂಡ್ ನ ಜೋಶಿಮಠ ಭೂ ಕುಸಿತ : ಕೇಂದ್ರದಿಂದ ಎಲ್ಲಾ ರೀತಿಯ ಸಹಾಯ ನೀಡಲು ಪ್ರಧಾನಿ ಮೋದಿ ಭರವಸೆ

ಉತ್ತರಾಖಂಡ್ ನ ಜೋಶಿಮಠ ಭೂ ಕುಸಿತ : ಕೇಂದ್ರದಿಂದ ಎಲ್ಲಾ ರೀತಿಯ ಸಹಾಯ ನೀಡಲು ಪ್ರಧಾನಿ ಮೋದಿ ಭರವಸೆ

ಕೆಎನ್‌ಎನ್ ಡಿಜಿಟಲ್ ಡೆಸ್ಕ್ : ಉತ್ತರಾಖಂಡದ ಜೋಶಿಮಠ್ ನಗರದಲ್ಲಿ ಭೂಮಿ ಕುಸಿತದ ಹಿನ್ನೆಲೆ ಪ್ರಧಾನಿ ಮೋದಿಯವರು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರೊಂದಿಗೆ ಪರಿಸ್ಥಿತಿಯ ಕುರಿತಂತೆ ಮಾಹಿತಿ ಪಡೆದಿದ್ದು, ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಸಾಧ್ಯವಿರುವ ಎಲ್ಲಾ ಸಹಾಯ ಮಾಡುವ ಭರವಸೆ ನೀಡಿದ್ದಾರೆ.

ಜೋಶಿಮಠದ ಪರಿಸ್ಥಿತಿ ಮತ್ತು ಜನರ ಪುನರ್ವಸತಿ ಮತ್ತು ಸುರಕ್ಷತೆಗಾಗಿ ತೆಗೆದುಕೊಂಡ ಕ್ರಮಗಳ ಬಗ್ಗೆ ಪ್ರಧಾನಿ ಮೋದಿ ನನ್ನೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದರು. ಜೋಶಿಮಠವನ್ನು ಉಳಿಸಲು ಸಾಧ್ಯವಿರುವ ಎಲ್ಲಾ ಸಹಾಯವನ್ನು ಪ್ರಧಾನಿ ಮೋದಿ ಭರವಸೆ ನೀಡಿದರು ಎಂದು ಉತ್ತರಾಖಂಡ್ ಸಿಎಂ ಧಾಮಿ ಹೇಳಿದ್ದಾರೆ.

ಇಂದು ಪ್ರಧಾನ ಮಂತ್ರಿಗಳ ಕಾರ್ಯಾಲಯ ಭೂ ಕುಸಿತದ ವಿಷಯಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ಸಭೆಯನ್ನು ನಡೆಸಲಿದೆ. ಉತ್ತರಾಖಂಡದ ಹಿರಿಯ ಅಧಿಕಾರಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಪಿಎಂ ಪ್ರಧಾನ ಕಾರ್ಯದರ್ಶಿ ಪಿ ಕೆ ಮಿಶ್ರಾ ಅವರು ಇಂದು ಮಧ್ಯಾಹ್ನ ಪಿಎಂಒದಲ್ಲಿ ಕ್ಯಾಬಿನೆಟ್ ಕಾರ್ಯದರ್ಶಿ ಮತ್ತು ಸರ್ಕಾರದ ಹಿರಿಯ ಅಧಿಕಾರಿಗಳು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸದಸ್ಯರೊಂದಿಗೆ ಉನ್ನತ ಮಟ್ಟದ ಪರಿಶೀಲನೆ ನಡೆಸಲಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಪಟ್ಟಣದ ವಿವಿಧೆಡೆ ಕಟ್ಟಡಗಳು ಹಾಗೂ ರಸ್ತೆಗಳಲ್ಲಿ ಬಿರುಕು ಬಿಟ್ಟಿರುವ ಹಿನ್ನೆಲೆಯಲ್ಲಿ ಸ್ಥಳೀಯ ನಿವಾಸಿಗಳು ತಮ್ಮ ಸುರಕ್ಷತೆಯ ಬಗ್ಗೆ ಚಿಂತಿತರಾಗಿದ್ದಾರೆ.

ಭೌಗೋಳಿಕ ತಜ್ಞರ ಪ್ರಕಾರ, ಜೋಶಿಮಠದಲ್ಲಿ ಭೂಮಿಯ ಕುಸಿತದ ಸಮಸ್ಯೆ ಸುಮಾರು 10 ವರ್ಷಗಳ ಹಿಂದೆ ಇತ್ತು. ಇದು ಕ್ಷಿಪ್ರವಾಗಿ ನೀರು ತೆಗೆದ ಕಾರಣದಿಂದ ಸಂಭವಿಸಿದೆ ಎಂದೇಳಿದ್ದಾರೆ.