ರಾಜ್ಯ ಸರ್ಕಾರದಿಂದ `SC-ST' ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿಸುದ್ದಿ

ಬೆಂಗಳೂರು : ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ನೌಕರರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಸ್ವಂತ ಅರ್ಹತೆ ಮೇಲೆ ನೇಮಕವಾದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸರ್ಕಾರಿ ನೌಕರರಿಗೆ ಮುಂಬಡ್ತಿ ಕೊಡುವಾಗ ಶೇ. 15 ಮತ್ತು ಶೇ.
ಎಸ್ ಸಿ-ಎಸ್ ಟಿ ಸಮುದಾಯಗಳಿಗೆ ರಾಜ್ಯ ಸಿವಿಲ್ ಸೇವಾ ಹುದ್ದೆಗಳಿಗೆ ನೀಡಲಾಗುವ ಮುಂಬಡ್ತಿಯಲ್‌ಇ ಕ್ರಮವಾಗಿ ಶೇ. 15 ಮತ್ತು ಶೇ. 3 ರಷ್ಟು ಮೀಸಲಾತಿ ನೀಡಲಾಗುತ್ತಿದೆ. ಆಯಾ ವೃಂದದ ಕಾರ್ಯನಿರತ ವೃಂದಬಲದಲ್ಲಿ ಎಸ್ಸಿ-ಎಸ್ಟಿ ವರ್ಗದ ನೌಕರರ ಪ್ರಾತಿನಿಧ್ಯತೆ ಪೂರ್ಣ ಮಟ್ಟವನ್ನು ತಲುಪುವವರೆಗೆ ಮೀಸಲಾತಿ ರೋಸ್ಟರ್ ಅಳವಡಿಸಬೇಕು. ರೋಸ್ಟರ್ ರೂಪಿಸುವ ಸಂದರ್ಭದಲ್ಲಿ ಸ್ವಂತ ಅರ್ಹತೆಯ ಆಧಾರದ ಮೇಲೆ ನೇಮಕಗೊಂಡ ನೌಕರರನ್ನು ಮುಂಬಡ್ತಿ ಸಂದರ್ಭದಲ್ಲಿ ಪರಿಗಣಿಸಬೇಕಾದ ಕುರಿತು ಸ್ಪಷ್ಟನೆ ನೀಡಿದೆ.
ಸ್ವಂತ ಅರ್ಹತೆಯ ಆಧಾರದ ಮೇಲೆ ನೇರ ನೇಮಕಗೊಂಡು, ನಂತರದ ವೃಂದಗಳಿಗೂ ಸ್ವಂತ ಅರ್ಹತೆಯ ಆಧಾರದಲ್ಲಿ ಮುಂಬಡ್ತಿ ಹೊಂದಿದ ಎಸ್ ಸಿ ಎಸ್ ಟಿ ನೌಕರರನ್ನು ಮೀಸಲಾತಿ ಕೋಟಾ ಎದುರು ಪರಿಗಣಿಸದೆ ಸಾಮಾನ್ಯ ಅಭ್ಯರ್ಥಿ ಅಥಾ ನೌಕರರೆಂದೇ ಪರಿಗಣಿಸಬೇಕು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.+