ಸಬ್ಸಿಡಿ ಡಿಸೇಲ್ ಕೊರತೆ: ಮಲ್ಪೆ ಬಂದರಿನಲ್ಲೇ ಲಂಗರು ಹಾಕಿದ ನೂರಾರು ಬೋಟ್

ಸಬ್ಸಿಡಿ ಡಿಸೇಲ್ ಕೊರತೆ: ಮಲ್ಪೆ ಬಂದರಿನಲ್ಲೇ ಲಂಗರು ಹಾಕಿದ ನೂರಾರು ಬೋಟ್

ಡುಪಿ: ಸಮರ್ಪಕವಾಗಿ ಸಬ್ಸಿಡಿ ಡಿಸೇಲ್ ಪೂರೈಕೆ ಆಗದ ಹಿನ್ನೆಲೆಯಲ್ಲಿ ನೂರಾರು ಸಂಖ್ಯೆಯ ಬೋಟ್ ಗಳು ಮಲ್ಪೆ ಬಂದರಿನಲ್ಲೇ ಲಂಗರು ಹಾಕುವ ಪರಿಸ್ಥಿತಿ ನಿರ್ಮಾಣ ಆಗಿದೆ.

ಮೀನುಗಾರಿಕಾ ದೋಣಿಗಳಿಗೆ ಸರಿಯಾದ ಸಮಯಕ್ಕೆ ಡೀಸೆಲ್ ಸಿಗದಿದ್ದರೆ ಮೀನುಗಾರಿಕೆ ನಡೆಯಲ್ಲ.

ಸರಕಾರವು ಎಪ್ರಿಲ್‌ ನಿಂದ ಮಾರ್ಚ್ ವರೆಗೆ 1.50 ಲಕ್ಷ ಕೆ.ಎಲ್ ತೆರಿಗೆ ರಹಿತ ಡೀಸೆಲ್ ಪೂರೈಸುತ್ತಿದೆ. ವಾರ್ಷಿಕ ಕೋಟಾ ಮುಗಿದ ಕಾರಣ ಫೆ. 14 ರಿಂದ ಯಾವುದೇ ಬಂಕ್‌ಗಳಲ್ಲಿ ಡೀಸೆಲ್ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಬಹುತೇಕ ದೋಣಿಗಳು ಮೀನುಗಾರಿಕೆಗೆ ತೆರಳಿಲ್ಲ, ಇದರಿಂದ ಕೋಟ್ಯಾಂತರ ರೂ.ಗಳ ನಷ್ಟ ಉಂಟಾಗಿದೆ.

ಈ ಬಾರಿಯ ಬಜೆಟ್ ನಲ್ಲಿ ಸರಕಾರ 50 ಲಕ್ಷ ಕೆ.ಎಲ್ ಹೆಚ್ಚುವರಿ ಸಬ್ಸಿಡಿ ಡೀಸೆಲ್ ನ್ನು ಘೋಷಿಸಿದೆ. ಆದರೆ ಅದು ಸಿಗುವುದು ಎಪ್ರಿಲ್ ನಲ್ಲಿ. ಹೀಗಾಗಿ ಮೀನುಗಾರರು ಬೇರೆ ದಾರಿಯಿಲ್ಲದೆ ಬೋಟ್ ಗಳನ್ನು ಬಂದರ್ ನಲ್ಲೇ ಲಂಗರು ಹಾಕಿ ಮೀನುಗಾರಿಕೆ ಸ್ಥಗಿತಗೊಳಿಸಿದ್ದಾರೆ.