ಸಾಲ ವಸೂಲಾತಿ; ಭತ್ತದ ಗದ್ದೆಯಲ್ಲಿ ಮಾರಾಮಾರಿ
ಸಾಲ ವಸೂಲಿಗೆ ಬಂದವರಿಂದ ಜಮೀನು ವಶಕ್ಕೆ ಯತ್ನಿಸಿದ ಮಹಿಳೆ ಮೇಲೆ ಹಲ್ಲೆ ನಡೆಸಿದ್ದು, ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕು ಉಳೇನೂರು ಗ್ರಾಮದ ಭತ್ತದ ಗದ್ದೆಯಲ್ಲಿ ಮಾರಾಮಾರಿ ನಡೆದಿದೆ. ಉಮೇಶಪ್ಪ ಎಂಬುವರಿಂದ ಬಸವರಾಜ, ಅಬ್ರಮ್ಮ ದಂಪತಿ 3 ಲಕ್ಷ ಸಾಲ ಪಡೆದಿದ್ದರು. ಆಗ ಸಾಲ ವಸೂಲಿಗೆ ಉಮೇಶಪ್ಪನ ಪರವಾಗಿ ಬಂದಿದ್ದ ದೇವರಾಜ ಮತ್ತು ಫಕೀರಪ್ಪ ರಿಂದ ಜಮೀನಿ ವಶಕ್ಕೆ ಯತ್ನಿಸಿದ ಅವರು ಸಾಲ ಪಡೆದಿದ್ದ ಬಸವರಾಜ ಪತ್ನಿಯನ್ನು ಹೊತ್ತೊಯ್ಯುತ್ತಿದ್ದರು. ಇದರಿಂದ ಆಕ್ರೋಶಗೊಂಡ ಬಸವರಾಜ ಕುಡುಗೋಲಿನಿಂದ ಹಲ್ಲೆಗೆ ಯತ್ನಿಸಿದ್ದರು ಎಂದು ತಿಳಿದು ಬಂದಿದೆ.