ಮಂಗಳೂರು: ಕಾರಿನ ಸಹಪ್ರಯಾಣಿಕ ಹೆಲ್ಮೆಟ್‌ ಧರಿಸಿಲ್ಲವೆಂದು ದಂಡ !

ಮಂಗಳೂರು: ಕಾರಿನ ಸಹಪ್ರಯಾಣಿಕ ಹೆಲ್ಮೆಟ್‌ ಧರಿಸಿಲ್ಲವೆಂದು ದಂಡ !

ಮಂಗಳೂರು : ಕಾರಿನಲ್ಲಿ ಸಹಪ್ರಯಾಣಿಕ ಹೆಲ್ಮೆಟ್‌ ಧರಿಸಿಲ್ಲವೆಂದು ಪೊಲೀಸರು ದಂಡ ವಿಧಿಸಿರುವ ವಿಲಕ್ಷಣ ಪ್ರಕರಣವೊಂದು ಮಂಗಳೂರಿನಲ್ಲಿ ನಡೆದಿದೆ. ಕಾರು ಚಾಲಕನಿಗೆ ನೋಟಿಸ್‌ ಬಂದಿದ್ದು, 500 ರೂ. ದಂಡ ಕಟ್ಟುವಂತೆ ತಿಳಿಸಲಾಗಿದೆ.

ನವೆಂಬರ್‌ 29ರಂದು ಮಂಗಳಾದೇವಿಯಲ್ಲಿ ನಡೆದ ಟ್ರಾಫಿಕ್‌ ಉಲ್ಲಂಘನೆಗೆ ಸಂಬಂಧಿಸಿದಂತೆ ಈ ನೋಟಿಸ್‌ ಜಾರಿಯಾಗಿದ್ದು, ಡಿ.

22ರಂದು ಚಾಲಕನ ಕೈಸೇರಿದೆ. ಉಲ್ಲಂಘನೆ ವಿವರಗಳು ಎನ್ನುವಲ್ಲಿ “ಕಾರು’ ಎಂದು ನಮೂದಿಸಲಾಗಿದ್ದು, ಉಲ್ಲಂಘನೆ ರೀತಿ ಕಾಲಂನಲ್ಲಿ “ಸಹಸವಾರ ಹೆಲ್ಮೆಟ್‌ ಧರಿಸಿಲ್ಲ’ ಎಂದಿದೆ.

ದ್ವಿಚಕ್ರ ವಾಹನ ಬದಲಿಗೆ ಕಾರು
ನೋಟಿಸ್‌ನಲ್ಲಿ ಉಲ್ಲಂಘನೆ ನಡೆದ ಸ್ಥಳದ ಚಿತ್ರವಿದೆ. ಅದರಲ್ಲಿ ದ್ವಿಚಕ್ರ ವಾಹನವೊಂದರಲ್ಲಿ ಸಹ ಸವಾರ ಹೆಲ್ಮೆಟ್‌ ಇಲ್ಲದೆ ಸಂಚರಿಸುತ್ತಿರುವುದು ಕಾಣಿಸುತ್ತಿದ್ದು, ಸ್ವಲ್ಪ ದೂರದಲ್ಲಿ ಕಾರು ಕೂಡ ಇದೆ. ಮಂಗಳೂರು ನಗರ ಸಂಚಾರ ಪೊಲೀಸ್‌ ಆಟೋಮೇಶನ್‌ ಸೆಂಟರ್‌ನಿಂದ ನೋಟಿಸ್‌ ಕಳುಹಿಸುವ ಸಂದರ್ಭ ದ್ವಿಚಕ್ರ ವಾಹನ ಸವಾರನಿಗೆ ನೋಟಿಸ್‌ ಕಳುಹಿಸುವ ಬದಲು ಕಾರು ಚಾಲಕನ ವಿಳಾಸಕ್ಕೆ ಕಳುಹಿಸಿರುವ ಸಾಧ್ಯತೆ ಇದೆ.