ರಾಹುಲ್ ಗಾಂಧಿಯ ಪಾದಯಾತ್ರೆ ಆರೋಗ್ಯದ ದೃಷ್ಟಿಯಿಂದ ಎಷ್ಟು ಸಮಂಜಸ? ತಜ್ಞರ ಅಭಿಪ್ರಾಯವೇನು?

ಕಾಂಗ್ರೆಸ್ ಸಂಸದರಾದ ರಾಹುಲ್ ಗಾಂಧಿಯವರು 3,570 ಕಿಲೋಮೀಟರ್‌ಗಳನ್ನು ಕಾಲ್ನಡಿಗೆಯಲ್ಲಿ ಕ್ರಮಿಸುವ ಭಾರತ್ ಜೋಡೋ ಯಾತ್ರೆಗೆ ಚಾಲನೆ ನೀಡಿದ್ದಾರೆ. 52 ರ ಹರೆಯದ ರಾಹುಲ್ ಗಾಂಧಿಯವರು ದಕ್ಷಿಣದ ರಾಜ್ಯಗಳ ಮೂಲಕ ಪ್ರಯಾಣಿಸುತ್ತಿದ್ದು, ಅವರು ಪ್ರತಿದಿನ ಸರಿಸುಮಾರು 25 ಕಿಲೋಮೀಟರ್ ಅಥವಾ 35,000 ಕ್ಕಿಂತ ಹೆಚ್ಚು ಹೆಜ್ಜೆಗಳನ್ನು ಹಾಕುವ ಮೂಲಕ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಐದು ತಿಂಗಳ ಕಾಲ ಪಾದಯಾತ್ರೆ ಯೋಜನೆಯನ್ನು ಮುಂದುವರಿಸುತ್ತಿದ್ದಾರೆ.
ಅತಿಯಾದ ನಡಿಗೆ ಆರೋಗ್ಯಕ್ಕೆ ಒಳ್ಳೆಯದೇ? ಅಭೂತಪೂರ್ವ ರಾಜಕೀಯ ನಡೆಯಾಗಿ ಈ ಯಾತ್ರೆ ಗಮನಸೆಳೆದಿದ್ದರೂ, ಗಾಂಧಿಯವರ ಆರೋಗ್ಯದ ಮೇಲೆ ಈ ಯಾತ್ರೆಯು ಯಾವ ರೀತಿಯ ಪ್ರಭಾವವನ್ನುಂಟು ಮಾಡಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಬೇಕು. ಗಾಂಧಿ ಕ್ರೀಡಾಪಟು ಅಲ್ಲದಿದ್ದರೂ ದೈಹಿಕ ಸಾಮರ್ಥ್ಯವನ್ನು ಹೊಂದಿರುವ ಗಾಂಧಿಯವರಿಗೆ ಈ ನಡಿಗೆ ಸೂಕ್ತವೇ? ಎಂಬುದು ಯೋಚಿಸಬೇಕಾದ ವಿಚಾರ. ಕಾಂಗ್ರೆಸ್ ಪಕ್ಷ ವಕ್ತಾರರು ತಿಳಿಸಿರುವಂತೆ ಸದ್ಯಕ್ಕೆ ಪ್ರತೀ ವಾರವೂ ವಿಶ್ರಾಂತ ದಿನವಿದ್ದು, ವೈದ್ಯಕೀಯ ಶಿಬಿರಗಳನ್ನು ನಡೆಸಲಾಗುವುದು ಮತ್ತು ಭಾಗವಹಿಸುವವರಿಗೆ ಯೋಗವನ್ನು ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ. ಟ್ರೆಂಡಿ ಸ್ಮಾರ್ಟ್ ವಾಚ್‌ಗಳು ಹಾಗೂ ಫಿಟ್‌ಬಿಟ್ ಸಾಧನಗಳಲ್ಲಿ ದಾಖಲಾಗುವ ವ್ಯಾಯಾಮಕ್ಕೆ ಯುವಕರು ಹೆಚ್ಚು ಒಲವು ತೋರುತ್ತಿದ್ದಾರೆ ಹೀಗಾಗಿ ಮಧ್ಯವಯಸ್ಕ ಮತ್ತು ವಯಸ್ಸಾದವರಲ್ಲಿ ದೈನಂದಿನ ನಡಿಗೆ ಮತ್ತು ಹೆಚ್ಚುವರಿ ನಡಿಗೆ ಇದಕ್ಕಿರುವ ವ್ಯತ್ಯಾಸಗಳು ಕಂಡುಬರುತ್ತಿಲ್ಲ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ರಾಹುಲ್ ಗಾಂಧಿಯವರ ಕಾಲ್ನಡಿಗೆ ವಿಷಯದಲ್ಲಿಯೂ ಅತಿಯಾದ ನಡಿಗೆಯು ಆಯಾಸ, ಪಾದದ ಗುಳ್ಳೆಗಳು, ಶೂ ಕಚ್ಚುವಿಕೆ ಅಥವಾ ಸೊಂಟದ ಕೀಲು ನೋವು ಮಾತ್ರವಲ್ಲದೆ ರಕ್ತಹೀನತೆ, ನಿರ್ಜಲೀಕರಣ ಅಥವಾ ಸ್ನಾಯುವಿನ ಒತ್ತಡದಂತಹ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ವೈದ್ಯಕೀಯ ಸಲಹೆ ದೆಹಲಿ ಮೂಲದ ಇಂಡಿಯನ್ ಸ್ಪೈನಲ್ ಇಂಜ್ಯೂರೀಸ್ ಸೆಂಟರ್ (ISIC) ನಲ್ಲಿ ಮೂಳೆಚಿಕಿತ್ಸೆ ತಜ್ಞ, ಕಾಲು ಮತ್ತು ಪಾದದ ಮತ್ತು ಕ್ರೀಡಾ ಗಾಯಗಳ ತಜ್ಞರಾದ ಡಾ.ಅಭಿಷೇಕ್ ಜೈನ್ ಅವರ ಪ್ರಕಾರ, ಪಾದದ ಗುಳ್ಳೆಗಳು, ಶೂ ಕಚ್ಚುವಿಕೆಗಳು, ನೆಲದಲ್ಲಿ ನಡೆಯುವಾಗ ಉಂಟಾಗುವ ಹಿಮ್ಮಡಿ ನೋವು 25 ಕಿಲೋಮೀಟರ್‌ಗಳವರೆಗೆ ಇದ್ದೇ ಇರುತ್ತದೆ ಮತ್ತು ಹಾಗೆಯೇ ಸಂಭವಿಸುತ್ತದೆ. ನಡಿಗೆಯನ್ನು ಒಳಗೊಂಡಿರುವ ವ್ಯಾಯಾಮವನ್ನು ಅತಿಯಾಗಿ ಮಾಡುವ ಸಂದರ್ಭದಲ್ಲಿ ಸಂಪೂರ್ಣ ದೇಹವನ್ನು ಪರೀಕ್ಷೆಗೆ ಒಳಪಡಿಸುವುದು ಮುಖ್ಯ ಎಂಬುದು ಅವರ ಅಭಿಪ್ರಾಯವಾಗಿದೆ. ನಡಿಗೆಯು, ವ್ಯಾಯಾಮದ ಸುಲಭ ಮತ್ತು ಸಾಮಾನ್ಯ ರೂಪವಾಗಿದ್ದು, ಯಾವುದೇ ವಿಶೇಷ ತರಬೇತಿ ಅಥವಾ ಸಲಕರಣೆಗಳ ಅಗತ್ಯವಿರುವುದಿಲ್ಲ. ಆದಾಗ್ಯೂ, ಯಾವಾಗಲೂ ಕುಳಿತುಕೊಳ್ಳುವ ವ್ಯಕ್ತಿಯು, ದಿನಕ್ಕೆ ಐದು ಮೈಲುಗಳಷ್ಟು ಹಠಾತ್ತನೆ ನಡೆಯುವುದು ಕೆಲವು ರೀತಿಯ ಗಾಯಕ್ಕೆ ನೋವಿಗೆ ಕಾರಣವಾಗಬಹುದು ಎಂದು ಹಿರಿಯ ಸಲಹೆಗಾರ ಗ್ಯಾಸ್ಟ್ರೋಎಂಟರಾಲಜಿಸ್ಟ್ ಮತ್ತು ಭಾರತೀಯ ವೈದ್ಯಕೀಯ ಸಂಘದ ಮಾಜಿ ಅಧ್ಯಕ್ಷ ಡಾ ರಾಜೀವ್ ಜಯದೇವನ್ ಹೇಳುತ್ತಾರೆ. ವ್ಯಕ್ತಿಯು ಅತಿಯಾಗಿ ನಡೆದಾಗ ಏನಾಗುತ್ತದೆ? ನಮ್ಮ ಕೀಲುಗಳು ನಡಿಗೆಯಂತಹ ವ್ಯಾಯಾಮದಿಂದ ಸವೆತವನ್ನು ಅನುಭವಿಸುತ್ತವೆ ಎಂಬುದು ಜೈನ್ ಅಭಿಪ್ರಾಯವಾಗಿದೆ. ಸ್ನಾಯುವಿನ ನೋವು ಹಾಗೂ ಗಾಯಗಳಿಗೆ ಅತಿಯಾದ ನಡಿಗೆಯಿಂದ ಹಾನಿಯುಂಟಾಗುತ್ತದೆ ಎಂದು ತಿಳಿಸಿದ್ದಾರೆ. ಕೋವಿಡ್ -19 ನಿಂದ ಚೇತರಿಸಿಕೊಂಡ ಯಾವುದೇ ವ್ಯಕ್ತಿಯು ಕನಿಷ್ಠ ಮೂರು ತಿಂಗಳ ಕಾಲ ಶ್ರಮದಾಯಕ ವ್ಯಾಯಾಮಗಳನ್ನು ಮಾಡಬಾರದು. ಹೃದಯ ಸಮಸ್ಯೆ ಇರುವವರು ತಮ್ಮ ವೈದ್ಯರೊಂದಿಗೆ ತಾವು ಏನು ಮಾಡಬಹುದು ಮತ್ತು ಏನು ಮಾಡಬಾರದು ಎಂಬುದರ ಕುರಿತು ಪರೀಕ್ಷಿಸಬೇಕು ಎಂದು ಜಯದೇವನ್ ತಿಳಿಸಿದ್ದಾರೆ. ನಿಮ್ಮ ನಡಿಗೆಯ ಬಲವನ್ನು ಹೇಗೆ ನಿರ್ಧರಿಸುವುದು? ಒಬ್ಬ ವ್ಯಕ್ತಿಯು ಮಾಡಬೇಕಾದ ನಡಿಗೆಯ ಪ್ರಮಾಣವನ್ನು ಅವರ ದೈಹಿಕ ರಚನೆಯಿಂದ ನಿರ್ಧರಿಸಲಾಗುತ್ತದೆ ಎಂದು ಉದಯ್‌ಪುರದ ಪಾರಸ್ ಆಸ್ಪತ್ರೆಯ ಸಲಹೆಗಾರ ಮೂಳೆ ಮತ್ತು ಬೆನ್ನುಮೂಳೆಯ ಶಸ್ತ್ರಚಿಕಿತ್ಸಕ ಡಾ ದೀಪಕ್ ಅಗರ್ವಾಲ್ ತಿಳಿಸುತ್ತಾರೆ. ನಡಿಗೆಯ ಅವಧಿಯ ಹಠಾತ್ ಹೆಚ್ಚಳವು ಕೀಲುಗಳಿಗೆ ಸೂಕ್ಷ್ಮಆಘಾತವನ್ನು ಉಂಟುಮಾಡಬಹುದು ಎಂಬುದು ದೀಪಕ್ ಮಾತಾಗಿದೆ. ನಡಿಯ ಉತ್ತಮ ವಿಧಾನ ದೈಹಿಕ, ಮಾನಸಿಕ ಮತ್ತು ಹೃದಯದ ಆರೋಗ್ಯಕ್ಕಾಗಿ ವ್ಯಕ್ತಿಯು ಮಾಡಬಹುದಾದ ಅತ್ಯುತ್ತಮ ಕೆಲಸಗಳಲ್ಲಿ ನಡಿಗೆಯು ಒಂದು ಎಂದು ತಜ್ಞರು ನಂಬುತ್ತಾರೆ. ನಡಿಗೆಯು ಹೃದಯದ ಆರೋಗ್ಯವನ್ನು ಸುಧಾರಿಸುವುದರ ಜೊತೆಗೆ ಮೂಳೆಯ ಬಲವನ್ನು ಹೆಚ್ಚಿಸುತ್ತದೆ, ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಕ್ಯಾನ್ಸರ್ ಮತ್ತು ಬುದ್ಧಿಮಾಂದ್ಯತೆಯ ಅಪಾಯವನ್ನು ಕಡಿಮೆ ಮಾಡುತ್ತದೆ" ಎಂದು ಜಯದೇವನ್ ತಿಳಿಸಿದ್ದಾರೆ. ನಡಿಗೆಯು ಸ್ಥಿರವಾದ ವೇಳಾಪಟ್ಟಿಯನ್ನು ಅವಲಂಬಿಸಿರಬೇಕು ಹಾಗೂ ಸರಿಯಾದ ಪ್ರಮಾಣದಲ್ಲಿ ನಿರ್ವಹಿಸಬೇಕು ಎಂದು ತಿಳಿಸಿದ್ದಾರೆ.
ವ್ಯಾಯಾಮಕ್ಕೆ ಯುವಕರ ಒಲವು
ಅತಿಯಾದ ನಡಿಗೆಯಿಂದ ಅನೇಕ ಸಮಸ್ಯೆ