ಚಿತ್ರದಿಂದ ವೀರಗಾಸೆ ದೃಶ್ಯ ತೆಗೆದು ಹಾಕಲ್ಲ ಎಂದ ಹೆಡ್ ಬುಷ್ ತಂಡ

ಚಿತ್ರದಿಂದ ವೀರಗಾಸೆ ದೃಶ್ಯ ತೆಗೆದು ಹಾಕಲ್ಲ ಎಂದ ಹೆಡ್ ಬುಷ್ ತಂಡ

ಡಾಳಿ ಧನಂಜಯ್ ನಟನೆಯ ಹೆಡ್ ಬುಷ್ ಸಿನಿಮಾದ ವೀರಗಾಸೆ ವಿವಾದ ಸತತ ಎರಡು ದಿನಗಳಿಂದ ಗಾಂಧಿನಗರದಲ್ಲಿ ಸದ್ದು ಮಾಡುತ್ತಿದೆ. ವೀರಗಾಸೆ ಕಲೆ ಮತ್ತು ವೀರಭದ್ರ ದೇವರಿಗೆ ಚಿತ್ರದಲ್ಲಿ ಯಾವುದೇ ರೀತಿಯಲ್ಲೂ ಅವಮಾನ ಮಾಡಿಲ್ಲ ಎಂದು ಧನಂಜಯ್ ಸೇರಿದಂತೆ ಇಡೀ ಸಿನಿಮಾ ತಂಡ ಹೇಳಿಕೆ ನೀಡಿದೆ.

ಆದರೂ ಆ ದೃಶ್ಯವನ್ನು ಸಿನಿಮಾದಿಂದ ಕೈ ಬಿಡುವಂತೆ ಒತ್ತಾಯಿಸಲಾಗುತ್ತಿದೆ.

ನಿನ್ನೆಯಷ್ಟೇ ಧನಂಜಯ್ ಮತ್ತು ನಿರ್ದೇಶಕ ಶೂನ್ಯ ಪತ್ರಿಕಾಗೋಷ್ಠಿ ನಡೆಸಿ ಈ ವಿಚಾರವಾಗಿ ಕ್ಷಮೆ ಕೇಳಿದರೂ ಪ್ರತಿಭಟನೆ ಮಾತ್ರ ನಿಂತಿಲ್ಲ.

ವೀರಗಾಸೆಗೆ ಅವಮಾನ ಮಾಡಿಲ್ಲದಿದ್ದರೂ ಕ್ಷಮೆ ಕೇಳಿದ್ದೇವೆ. ಆದರೂ ವಿವಾದ ಕಾವು ಕಡಿಮೆ ಆಗುತ್ತಿಲ್ಲ. ಸಿನಿಮಾದಿಂದ ದೃಶ್ಯವನ್ನೇ ಕತ್ತರಿಸುವಂತೆ ಒತ್ತಡ ಹೇರಲಾಗುತ್ತಿದೆ. ಆದರೆ ಯಾವುದೇ ಕಾರಣಕ್ಕೂ ಆ ದೃಶ್ಯವನ್ನು ಕೈ ಬಿಡುವ ಪ್ರಶ್ನೆಯೇ ಇಲ್ಲವೆಂದು ಸಿನಿಮಾ ತಂಡ ಹೇಳಿದೆ. ವಿರೋಧಿಸುವವರಿಗಿಂತಲೂ ಅದನ್ನು ಮೆಚ್ಚಿಕೊಂಡವರ ಸಂಖ್ಯೆ ದೊಡ್ಡದಿದೆ ಎನ್ನುವ ಕಾರಣಕ್ಕಾಗಿ ಅದನ್ನು ಸಿನಿಮಾದಲ್ಲಿ ಮುಂದುವರೆಸುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ.

ಸಿನಿಮಾದಲ್ಲಿ ಇರುವ ದೃಶ್ಯಗಳನ್ನು ತೆಗೆದು ಹಾಕಬೇಕು ಎಂದು ಇಂದು ಬಜರಂಗ ದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಅಲ್ಲದೆ ಡಾಲಿ ಧನಂಜಯ್ ಕಟೌಟ್ ಗೆ ಚಪ್ಪಲಿ ಹಾರ ಹಾಕಿ ಕಪ್ಪು ಮಸಿ ಬಳಿದು ಆಕ್ರೋಶ ಹೊರ ಹಾಕಿದ್ದರು. ಜೊತೆಗೆ ಇದೀಗ ಘಟನೆ ಸರ್ಕಾರಕ್ಕೂ ತಾಗಿದೆ. ಸುನೀಲ್ ಕುಮಾರ್ ವಿರುದ್ಧ ಸಾಕಷ್ಟು ಮಂದಿ ತಿರುಗಿ ಇದ್ದಿದ್ದಾರೆ. ಬರೀ ನಿಮ್ಮ ಭಾಗದ ಕಲಾವಿದರಿಗೆ ಮಾತ್ರ ಮಾಸಾಶನ ನೀಡಿ ತಾರತಮ್ಯ ತೋರುತ್ತಿದ್ದೀರಿ. ನಿಮಗೆ ವೀರಗಾಸೆಯ ಬಗ್ಗೆ ಅಷ್ಟೊಂದು ಕಾಳಜಿ ಇದ್ದರೆ, ಕೂಡಲೇ ಅವರಿಗೂ ಮಾಸಾಶನ ನೀಡಬೇಕು ಎಂದು ಹಲವರು ಆಗ್ರಹಿಸಿದ್ದಾರೆ.