'ಕೆಜಿಎಫ್' ಚಿತ್ರಕ್ಕೆ ಇಂದು ವಿಶೇಷ ದಿನ: ಟ್ವೀಟ್‌ ಮಾಡಿದ ನಿರ್ದೇಶಕ ಪ್ರಶಾಂತ್‌ ನೀಲ್

'ಕೆಜಿಎಫ್' ಚಿತ್ರಕ್ಕೆ ಇಂದು ವಿಶೇಷ ದಿನ: ಟ್ವೀಟ್‌ ಮಾಡಿದ ನಿರ್ದೇಶಕ ಪ್ರಶಾಂತ್‌ ನೀಲ್

ಭಾರತೀಯ ಚಿತ್ರರಂಗದಲ್ಲಿ ಇತಿಹಾಸದ ಪುಟ ಸೇರಿದ ಕನ್ನಡದ ಚಿತ್ರ ಕೆಜಿಎಫ್‌ ಇಂದಿಗೆ (21-12-2021) ತೆರೆ ಕಂಡು 3 ವರ್ಷ ಆಗಿದೆ. ಮೂರು ವರ್ಷದ ಹಿಂದೆ ಮೊಳಗಿದ ಕೆಜಿಎಫ್ ರಣ ಕಹಳೆ ಇನ್ನೂ ನಿಂತಿಲ್ಲ. ಇನ್ನೂ ಕೂಡ ಕೆಜಿಫ್‌ಗೆ ಅಷ್ಟೇ ಕ್ರೇಜ್ ಇದೆ. ಅದೇ ಕ್ರೇಜ್ ಜೊತೆಗೆ ಪ್ರೇಕ್ಷಕರು ಕೆಜಿಎಫ್‌2 ಸಿನಿಮಾ ನೋಡಲು ಹಾತೊರೆಯುತ್ತಿದ್ದಾರೆ.

ಕೆಜಿಎಫ್‌ ಚಿತ್ರ ರಿಲೀಸ್‌ ಬಳಿಕ ಭಾರತೀಯ ಚಿತ್ರರಂಗ ಕನ್ನಡದ ಕಡೆ ಒಮ್ಮೆ ತಿರುಗಿ ನೋಡಿತು. ಯಾಕೆಂದರೆ ಕೆಜಿಎಫ್ ಹಲವು ಭಾಷೆಗಳಲ್ಲಿ ತೆರೆಕಂಡು ಎಲ್ಲಾ ವರ್ಗದ ಪ್ರೇಕ್ಷಕರ ಮನ ಮುಟ್ಟಿತ್ತು. ಸಿನಿಮಾ ಮಂದಿ ಕೂಡ ಕೆಜಿಎಫ್ ಚಿತ್ರವನ್ನು ಬೆರಗು ಕಣ್ಣಿನಿಂದ ನೋಡಿದ್ದರು.

2018ರಲ್ಲಿ ತೆರೆಗೆ ಬಂದ 'ಕೆಜಿಎಫ್' ವರ್ಚಸ್ಸು ವರ್ಷಗಳು ಉರುಳಿದರು ಕಡಿಮೆ ಆಗಿಲ್ಲ. ಈಗ ಚಿತ್ರಕ್ಕೆ ಮೂರು ವರ್ಷ ತುಂಬಿದ ಕಾರಣ ಅಭಿಮಾನಿಗಳು ಈ ಖುಷಿಯನ್ನು ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮಿಸುತ್ತಿದ್ದಾರೆ. Ads by

'ಕೆಜಿಎಫ್' ಚಿತ್ರ ರಿಲೀಸ್‌ ಆಗಿ 3 ವರ್ಷ! ನಟ ಯಶ್ ಅಭಿನಯದ 'ಕೆಜಿಎಫ್' ಚಿತ್ರ ರಿಲೀಸ್ ಆಗಿ ಮೂರು ವರ್ಷ ಆಗಿದೆ. ಕನ್ನಡದ 'ಕೆಜಿಎಫ್'‌ ತೆರೆಕಂಡು ಮೂರು ವರ್ಷ ಆಗೇ ಬಿಡ್ತು. ಈ ಚಿತ್ರ ಹಲವು ದಾಖಲೆಗಳಿಗೆ ಸಾಕ್ಷಿ ಆದ ಸಿನಿಮಾ. ಕೆಜಿಎಫ್ ಸಿನಿಮಾ ರಿಲೀಸ್ ಬಳಿಕ ಸಾಕಷ್ಟು ಮೆಚ್ಚುಗೆಗೆ ಪಾತ್ರ ಆಯ್ತು. ಸದ್ಯ ಈ ಚಿತ್ರ ರಿಲೀಸ್‌ ಆಗಿ 3 ವರ್ಷ ಆಗಿದೆ. ಹಾಗಾಗಿ ಯಶ್‌ ಅಭಿಮಾನಿಗಳು ಈ ಸಂಭ್ರಮವನ್ನು ಹಂಚಿಕೊಳ್ಳುತ್ತಿದ್ದಾರೆ.

ಟ್ವಿಟ್ಟರ್‌ನಲ್ಲಿ ಖುಷಿ ಹಂಚಿಕೊಂಡ ಪ್ರಶಾಂತ್‌ ನೀಲ್!

ನಿರ್ದೇಶಕ ಪ್ರಶಾಂತ್ ನೀಲ್‌ ತಾಕತ್ತು ಏನು ಎನ್ನುವುದನ್ನು 'ಕೆಜಿಎಫ್' ಸಿನಿಮಾ ಸಾಬೀತು ಮಾಡಿದೆ. 'ಕೆಜಿಎಫ್' ಬಳಿಕ ನಿರ್ದೇಶಕ ಪ್ರಶಾಂತ್ ನೀಲ್‌ ನಸೀಬು ಬದಲಾಗಿ ಹೋಯ್ತು. ಸದ್ಯ ಪ್ರಶಾಂತ್‌ ನೀಲ್‌ಗೆ ಸಾಕಷ್ಟು ಬೇಡಿಕೆ ಇದೆ. ಬಾಲಿವುಡ್, ಟಾಲಿವುಡ್, ಕಾಲಿವುಡ್‌ನಲ್ಲಿ ಹೆಚ್ಚಿನ ಬೇಡಿಕೆ ತಂದು ಕೊಟ್ಟಿದ್ದು ಇದೇ 'ಕೆಜಿಎಫ್'. ಸದ್ಯ ಪ್ರಶಾಂತ್‌ ನೀಲ್‌ ಪ್ರಭಾಸ್‌ಗೆ 'ಸಲಾರ್' ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ನಿರ್ದೇಶಕ ಪ್ರಶಾಂತ್‌ನೀಲ್‌ ಕೆಜಿಎಫ್‌ ಗೆಲುವಿಗೆ ಕಾರಣ ಆದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.

ಯಶ್ ಸ್ಟಾರ್‌ ಬದಲಿಸಿದ 'KGF'!
ರಾಕಿಂಗ್ ಯಶ್ ಈಗ ಬರೀ ರಾಕಿಂಗ್ ಸ್ಟಾರ್‌ ಆಗಿ ಮಾತ್ರ ಉಳಿದಿಲ್ಲ. ಯಾಕೆಂದರೆ ಕೆಜಿಎಫ್ ಬಳಿಕ ಯಶ್ ಅವರನ್ನು ಕರೆಯುವುದೇ ನ್ಯಾಷನಲ್‌ ಸ್ಟಾರ್‌ ಅಂತ. ಆ ಮಟ್ಟಿಗೆ ಯಶ್ ಹವಾ ರೀಚ್ ಆಗಿದೆ. ಅದಕ್ಕೆ ಕಾರಣ ಆಗಿದ್ದು ಇದೇ ಕೆಜಿಎಫ್ ಸಿನಿಮಾ. ಕೆಜಿಎಫ್‌ ಬಳಿಕ ಯಶ್ ಅವರಿಗೆ ಬಾಲಿವುಡ್‌ನಿಂದ ಸಾಕಷ್ಟು ಆಫರ್ ಬಂದಿವೆ. ಆದರೆ ಯಾವುದನ್ನು ಒಪ್ಪಿಕೊಳ್ಳದೆ ಯಶ್ ಕೆಜಿಎಫ್2 ಚಿತ್ರದ ರಿಲೀಸ್‌ಗಾಗಿ ಕಾಯುತ್ತಿದ್ದಾರೆ.

ಬಾಕ್ಸಾಫೀಸ್‌ ಧೂಳೆಬ್ಬಿಸಿದ ಕೆಜಿಎಫ್! ಕನ್ನಡದ ಕೆಜಿಎಫ್ ಹಲವು ಭಾಷೆಗಳಲ್ಲಿ ತೆರೆಗೆ ಬಂದು ಬಾಕ್ಸಾಫೀಸ್‌ ಧೂಳೆಬ್ಬಿಸಿತು. 80 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರದ ಒಟ್ಟು ಗಳಿಕೆ 250 ಕೋಟಿ. ಜೊತೆಗೆ ಅತಿ ವೇಗವಾಗಿ 100 ಕೋಟಿ ಗಳಿಸಿದ ಮೊದಲ ಕನ್ನಡ ಚಿತ್ರ ಇದು. ಈ ಮೂಲಕ ಬಾಕ್ಸಾಫೀಸ್‌ನಲ್ಲೂ ಕೂಡ ಕೆಜಿಎಫ್ ದಾಖಲೆ ಮಾಡಿತು. ವರ್ಷಗಳು ಉರುಳಿದರೂ ಕೆಜಿಎಫ್‌2 ಚಿತ್ರವನ್ನು ನೋಡಲು ಪ್ರೇಕ್ಷಕರು ಕಾತರರಾಗಿದ್ದಾರೆ.