ರೈಲ್ವೇ ಪ್ರಯಾಣಿಕರೇ ಗಮನಿಸಿ : ಈ ಮಾರ್ಗಗಳ ರೈಲು ಸಂಚಾರದಲ್ಲಿ ಬದಲಾವಣೆ

ರೈಲ್ವೇ ಪ್ರಯಾಣಿಕರೇ ಗಮನಿಸಿ : ಈ ಮಾರ್ಗಗಳ ರೈಲು ಸಂಚಾರದಲ್ಲಿ ಬದಲಾವಣೆ

ಬೆಂಗಳೂರು : ಜೋಕಟ್ಟೆ ಮತ್ತು ಪಡೀಲ್ ನಿಲ್ದಾಣಗಳ ನಡುವೆ ಹಳೆಯ ಸುರಂಗದಲ್ಲಿ ಟ್ರ್ಯಾಕ್ ನವೀಕರಣ (ಸಿಟಿಆರ್) ಕಾಮಗಾರಿ ಸಲುವಾಗಿ ಪೆಬ್ರುವರಿ 15, 18, 22, 25 ಮತ್ತು ಮಾರ್ಚ್ 01, 2023 ರವರೆಗೆ ಕೆಲವು ರೈಲುಗಳನ್ನು ತಾತ್ಕಾಲಿಕವಾಗಿ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ದಕ್ಷಿಣ ರೈಲ್ವೆ ವಲಯವು ಸೂಚಿಸಿದೆ.

ಅವುಗಳು ಈ ಕೆಳಗಿನಂತಿವೆ.

1. ಪೆಬ್ರುವರಿ 15, 22 ಮತ್ತು ಮಾರ್ಚ್ 01, 2023 ರಂದು ಹಿಸಾರ್ ನಿಲ್ದಾಣದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 22475 ಹಿಸಾರ್-ಕೊಯಿಮುತ್ತೂರು ಎಸಿ ಸಾಪ್ತಾಹಿಕ ವಿಶೇಷ ರೈಲು ವಸಾಯಿ ರೋಡ್, ಪುಣೆ, ಸೋಲಾಪುರ, ವಾಡಿ ಜಂಕ್ಷನ್, ರಾಯಚೂರು, ಗುಂತಕಲ್, ಧರ್ಮಾವರಂ, ಯಲಹಂಕ, ಕೃಷ್ಣರಾಜಪುರಂ, ಬಂಗಾರಪೇಟೆ ಮತ್ತು ಜೋಲಾರಪೇಟೆ ಮಾರ್ಗವಾಗಿ ಚಲಿಸಲಿದೆ.

2. ಪೆಬ್ರುವರಿ 18 ಮತ್ತು 25, 2023 ರಂದು ಕೊಯಿಮುತ್ತೂರಿನಿಂದ ಪ್ರಾರಂಭವಾಗುವ ರೈಲು ಸಂಖ್ಯೆ 22476 ಕೊಯಿಮುತ್ತೂರು-ಹಿಸಾರ್ ಎಸಿ ಸಾಪ್ತಾಹಿಕ ವಿಶೇಷ ರೈಲು ಜೋಲಾರಪೇಟೆ, ಬಂಗಾರಪೇಟೆ, ಕೃಷ್ಣರಾಜಪುರಂ, ಯಲಹಂಕ, ಧರ್ಮಾವರಂ, ಗುಂತಕಲ್, ರಾಯಚೂರು, ವಾಡಿ ಜಂಕ್ಷನ್, ಸೋಲಾಪುರ, ಪುಣೆ ಮತ್ತು ವಸಾಯಿ ರೋಡ್ ಮಾರ್ಗವಾಗಿ ಚಲಿಸಲಿದೆ ಎಂದು ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಶ್ ಹೆಗಡೆ ನೈರುತ್ಯ ರೈಲ್ವೆ, ಹುಬ್ಬಳ್ಳಿ ಇಲಾಖೆ ಇವರು ಮಾಹಿತಿ ನೀಡಿದ್ದಾರೆ.